

ನವದೆಹಲಿ: ಮದುವೆಗೆ ಮುನ್ನ ಎಲ್ಲರೂ ತಮ್ಮ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಕೆಲವು ಜೋಡಿ ಮಾತ್ರ ಪ್ರೀ ವೆಡ್ಡಿಂಗ್ ಶೂಟ್‌ಗಳನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ವಧುವಿನಂತೆ ಸಿಂಗಾರ ಗೊಂಡು ಜೀಮ್ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಧುವಿನಂತೆ ಸಿಂ ಗಾರಗೊಂಡು ಕಂಗೊಳಿಸುತ್ತಿರುವುದು ಕಂಡು ಬಂದಿದೆ. ಮಹಿಳೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಫೋಟೋಗ್ರಾಫರ್ ಅವರ ಫೋಟೋ ತೆಗೆಯುತ್ತಿದ್ದಾರೆ. ಇದರ ನಂತರ, ಮಹಿಳೆ ಬೈಸೆಪ್ಸ್ ವ್ಯಾಯಾಮ ಮಾಡುತ್ತಾ ಜಿಮ್‌ನಲ್ಲಿ ಫೋಟೋಶೂಟ್ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ Xನಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 34 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ.
ವಿಡಿಯೋವನ್ನು ನೋಡಿದ ನಂತರ ನೆಟ್ಟಿಗರು ನೀವು ವರನನ್ನು ಹೆದರಿಸುತ್ತಿದ್ದೀರಾ? ಸಹೋದರಿ ನೀವು ವಧು ಅಥವಾ ಕುಸ್ತಿಪಟುವಾಗಲು ತಯಾರಿ ನಡೆಸುತ್ತಿದ್ದೀರಾ? ನಿಮ್ಮನ್ನು ಮದುವೆ ಆಗುತ್ತಿರುವ ವ್ಯಕ್ತಿಯ ಕಥೆ ಮುಗಿಯಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.