More

  ಶ್ರೀಲೀಲಾಗೆ ಬಾಯ್ ಫ್ರೆಂಡ್ ಇದ್ದಾನಾ? ಆತನೂ ಕೂಡಾ ಡಾಕ್ಟರ್ ಅಂತೆ!

  ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ತೆಲುಗು ಇಂಡಸ್ಟ್ರಿಯಲ್ಲಿ ಈಕೆ ಹೆಸರು ಇತ್ತೀಚಿನವರೆಗೂ ಸದ್ದು ಮಾಡುತ್ತಿದೆ. ಸ್ಟಾರ್​ ನಟರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಈ ನಟಿಗೆ ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಾಗಿಯೆ ಇದೆ. ಈ ನಟಿ ಸಿನಿಮಾವನ್ನಲ್ಲದೆ ವೈಯಕ್ತಿಕ ವಿಚಾರವಾಗಿ ಒಂದು ಗುಸು.. ಗುಸು ಸುದ್ದಿ ಹರಿದಾಡುತ್ತಿದೆ.

  ಶ್ರೀಲೀಲಾಗೆ ಬಾಯ್ ಫ್ರೆಂಡ್ ಇದ್ದಾನಾ? ಆತನೂ ಕೂಡಾ ಡಾಕ್ಟರ್ ಅಂತೆ!

  ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಳ್ಳಿ ಸಂದಡಿ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ಶ್ರೀಕಾಂತ್ ಪುತ್ರ ರೋಷನ್ ನಾಯಕನಾಗಿ ಫೇಮಸ್ ಆದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿತು. ಈ ಚಿತ್ರದ ನಂತರ ಅವರು ಶ್ರೀಲೀಲಾಗೆ ಸಾಲುಸಾಲು ಅವಕಾಶಗಳು ಬಂದವು. ಈಗ ಟಾಲಿವುಡ್​​ನಲ್ಲಿ ಸ್ಟಾರ್​ನಲ್ಲಿಯರ ಸಾಲಿನಲ್ಲಿ ಶ್ರೀಲೀಲಾ ಕೂಡಾ ಒಬ್ಬರಾಗಿದ್ದಾರೆ.

  sreeleela

  ರಾತ್ರೋರಾತ್ರಿ ಸ್ಟಾರ್ ಆದಳು. ಸ್ಟಾರ್ ಹೀರೋಗಳಿಗೆ ಪೈಪೋಟಿ ನೀಡಿ ಸೀನಿಯರ್, ಜೂನಿಯರ್ ಎಂಬ ಭೇದವಿಲ್ಲದೆ ಹೀರೋಗಳ ಜತೆ ನಟಿಸಿದ್ದ ಈ ಚೆಲುವೆ ವಯಸ್ಸಾದ ಹೀರೋಗಳಿಗೂ ಜೊತೆಯಾಗುತ್ತಿದ್ದಾರೆ. ಶ್ರೀಲೀಲಾ ಟಾಲಿವುಡ್​​ನ ಟಾಪ್ ಹೀರೋಯಿನ್ ಆಗಿದ್ದಾರೆ. ಈ ನಡುವೆ ಶ್ರೀಲೀಲಾ ಅವರ ಗೆಳೆಯನಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  sreeleela

  ಸಿನಿಮಾ ಮತ್ತು ಅಧ್ಯಯನ ಎರಡನ್ನೂ ಬ್ಯಾಲೆನ್ಸ್​​ ಮಾಡುತ್ತಿರುವ ಈ ನಟಿ ತಮ್ಮ ವ್ಯಾಸಂಗಕ್ಕೆ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರು. ಶ್ರೀಲೀಲಾ ಸದ್ಯ ಎಂಬಿಬಿಎಸ್ ಓದುತ್ತಿದ್ದಾಳೆ. ಇತ್ತೀಚೆಗಷ್ಟೇ ಆಕೆಯ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಸತ್ಯಾಂಶ ಗೊತ್ತಿಲ್ಲ ಆದರೆ ಶ್ರೀಲೀಲಾ ಬಾಯ್ ಫ್ರೆಂಡ್ ಇದ್ದಾನೆ. ಇತ್ತೀಚೆಗಷ್ಟೇ ಶ್ರೀ ಲೀಲಾ ಶೂಟಿಂಗ್ ಗೆ ಗ್ಯಾಪ್ ಇರುವುದರಿಂದ ಗೆಳೆಯನ ಜೊತೆ ಸುತ್ತಾಡುತ್ತಿದ್ದಳು.  ಶ್ರೀ ಲೀಲಾ ಅವರ ಗೆಳೆಯ ಕೂಡ ಜೊತೆಗೆ ಡಾಕ್ಟರ್ ಓದುತ್ತಿದ್ದಾನೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗಿದೆ.

  ಶ್ರೀಲೀಲಾಗೆ ಬಾಯ್ ಫ್ರೆಂಡ್ ಇದ್ದಾನಾ? ಆತನೂ ಕೂಡಾ ಡಾಕ್ಟರ್ ಅಂತೆ!

  ಅಷ್ಟೇ ಅಲ್ಲ ದೊಡ್ಡ ರಾಜಕೀಯ ನಾಯಕರ ಮೊಮ್ಮಗ.. ಸಾವಿರಾರು ಕೋಟಿಯ ಏಕೈಕ ವಾರಸುದಾರ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆ ಮೂಲಕ ಶ್ರೀಲೀಲಾ ಅವರನ್ನು ಮದುವೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ವೈರಲ್ ಆಗಿದೆ. ಇದರಲ್ಲಿ ಸತ್ಯಾಂಶ ಗೊತ್ತಿಲ್ಲ. ಆದರೆ ಹಲವು ಸೋಶಿಯಲ್​ ಮೀಡಿಯಾ ಪ್ಲಾಟ್​ಪಾರ್ಮ್​​ಗಳು ಈ ಕುರಿತಾಗಿ ಸುದ್ದಿ ಮಾಡಿವೆ.

  ಶ್ರೀಲೀಲಾಗೆ ಬಾಯ್ ಫ್ರೆಂಡ್ ಇದ್ದಾನಾ? ಆತನೂ ಕೂಡಾ ಡಾಕ್ಟರ್ ಅಂತೆ!

  ಶ್ರೀಲಿಲಾಗೆ ಬಾಯ್ ಫ್ರೆಂಡ್ ಇದ್ದಾನಾ? ಅವಳು ಈ ವಿಚಾರವನ್ನು ರಹಸ್ಯವಾಗಿಟ್ಟಿದ್ದಾಳೆ? ಇಂಡಸ್ಟ್ರಿಗೆ ಸಂಬಂಧ ಇದೆಯೇ..? ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಸತ್ಯವೆಷ್ಟು..? ಎನ್ನುವ ಕುರಿತಾಗಿ ನಟಿಯೆ ಸ್ಪಷ್ಟನೆ ನೀಡಬೇಕಾಗಿದೆ.  ಈ ಕುರಿತಾದ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts