More

    ಎರಡೂ ಕೈಗಳನ್ನು ಮುರಿದುಕೊಂಡು ಆಸ್ಪತ್ರೆ ಪಾಲಾದ ಖ್ಯಾತ ನಟಿ!

    “ಯೇ ಹೈ ಮೊಹಬ್ಬತೇ’ ಹಿಂದಿ ಧಾರಾವಾಹಿ ಖ್ಯಾತಿಯ ನಟಿ ದಿವ್ಯಾಂಕಾ ತ್ರಿಪಾಠಿ, ಕಳೆದ ಎರಡು ದಶಕಗಳಲ್ಲಿ 40ಕ್ಕೂ ಅಧಿಕ ಧಾರಾವಾಹಿಗಳು, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದು, ಕಿರುತೆರೆಯ ಸ್ಟಾರ್​ ನಟಿ ಎನಿಸಿಕೊಂಡಿದ್ದಾರೆ. ಇಂತಹ ದಿವ್ಯಾಂಕಾ ಕೆಲ ದಿನಗಳ ಹಿಂದಷ್ಟೇ ಬಿದ್ದು ಎರಡೂ ಕೈಗಳನ್ನು ಮುರಿದುಕೊಂಡಿದ್ದಾರೆ.

    ಎರಡೂ ಕೈಗಳನ್ನು ಮುರಿದುಕೊಂಡು ಆಸ್ಪತ್ರೆ ಪಾಲಾದ ಖ್ಯಾತ ನಟಿ!

    ಘಟನೆ ಹೇಗಾಯಿತು? ಬೀಳಲು ಕಾರಣವೇನು? ಎಂಬುದರ ಬಗ್ಗೆ ಹೇಳಿಕೊಂಡಿಲ್ಲವಾದರೂ, ಜಿಮ್​ನಲ್ಲಿ ಹ್ಯಾಂಡ್​ ಸ್ಟ್ಯಾಂಡ್​​ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಅವರು, “ನಾನು ಕೈ ಫ್ರ್ಯಾಕ್ಚರ್​​ ಆದ ದಿನ ಹೀಗಿದ್ದೆ. ಆದಷ್ಟು ಬೇಗ ಮತ್ತಷ್ಟು ಶಕ್ತಿಯುತವಾಗಿ ವಾಪಸ್ಸಾಗಲಿದ್ದೇನೆ. ಪ್ರಾಮಿಸ್​’ ಎಂದು ಬರೆದುಕೊಂಡಿದ್ದಾರೆ.

    ಎರಡೂ ಕೈಗಳನ್ನು ಮುರಿದುಕೊಂಡು ಆಸ್ಪತ್ರೆ ಪಾಲಾದ ಖ್ಯಾತ ನಟಿ!

    ಹಾಗೇ ಕೈಗಳ ಸರ್ಜರಿ ಬಳಿಕ ದಿವ್ಯಾಂಕಾ, “ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದೇನೆ. ನಮ್ಮ ವಿಜ್ಞಾನ ತುಂಬಾ ಮುಂದುವರಿದಿದೆ. ರಿಕವರ್​ ಆಗುತ್ತಿರುವುದನ್ನು ನೋಡಿ ವೈದ್ಯರು ಖುಷಿಪಟ್ಟರು. ಈಗಾಗಲೇ ಫಿಸಿಯೋಥೆರಪಿ ಕೂಡ ಪ್ರಾರಂಭಿಸಿದ್ದೇನೆ. ಆದಷ್ಟು ಬೇಗ ಗುಣಮುಖಳಾಗಿ ವಾಪಸ್ಸಾಗಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ವೈದ್ಯರು ದಿವ್ಯಾಂಕಾ ತ್ರಿಪಾಠಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ​

    ಎರಡೂ ಕೈಗಳನ್ನು ಮುರಿದುಕೊಂಡು ಆಸ್ಪತ್ರೆ ಪಾಲಾದ ಖ್ಯಾತ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts