More

    ಸುಲಿಗೆ ಮಾಡಲು ಯತ್ನಿಸಿದ 100 ವರ್ಷದ ಅಜ್ಜಿ; FIR ದಾಖಲು

    ಕಾನ್ಪುರ: ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಶತಾಯುಷಿ ಒಬ್ಬರು ಜಾಗದ ಮಾಲೀಕರಿಗೆ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಚಂದ್ರಕಾಳಿ ದೇವಿ(100)ವರ್ಷದ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

    ಜಾಗದ ವಿಚಾರವಾಗಿ ತಗಾದೆ

    ದೂರುದಾರರಾದ ಮಾಧುರಿ ಎಂಬುವವರ ಹೆಸರಿನಲ್ಲಿ ಕಾನ್ಪುರದಲ್ಲಿ ಜಾಗ ಒಂದನ್ನು ಖರೀದಿಸಲಾಗಿತ್ತು. ಈ ವೇಳೆ ಚಂದ್ರಕಾಳಿ, ಆಕೆಯ ಮಕ್ಕಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ತಮ್ಮ ಹೆಸರಿನಲ್ಲಿರುವ ಕಾರಣ ಇಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸದಂತೆ ಮಾಲೀಕರಿಗೆ ಹೇಳಿದ್ದಾರೆ.

    Kanpur

    ಒಂದು ವೇಳೆ ಜಾಗದಲ್ಲಿ ಕಟ್ಟಡ ನಿರ್ಮಾಣವನ್ನು ಶುರು ಮಾಡಬೇಕಾದರೆ ತಮಗೆ 10 ಲಕ್ಷ ರೂಪಾಯಿ ನೀಡಬೇಕು ಕೊಡದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

    ಬೆದರಿಸಿ ಹಲ್ಲೆ

    ಮೇ 6ರಂದು ಜಾಗಕ್ಕೆ ಸಂಬಂಧಿಸಿದಂತೆ ಕೆಲಸ ಶುರು ಮಾಡಲು ಮುಂದಾದಾಗ ಮಹಿಳೆ ಹಾಗೂ ಆಕೆಯ ಪತಿ ಮೇಲೆ ಚಂದ್ರಕಾಳಿ 10-12 ಜನರನ್ನು ಬಿಟ್ಟು ಹಲ್ಲೆ ಮಾಡಿಸಿದ್ಧಾರೆ. ಕಳೆದ ಹಲವು ವರ್ಷಗಳಿಂದ ಇವರು ಮಿರ್ಜಾಪುರ ನಯಿ ಬಸ್ತಿಯಲ್ಲಿ ವಾಸಿಸುತ್ತಿದ್ದು ಸುತ್ತ ಮುತ್ತಲಿನಲ್ಲಿ ಯಾರಾದರೂ ಜಾಗ ಖರೀದಿಸಿದರೆ ಅವರಿಗೆ 5-10 ಲಕ್ಷ ರೂಪಾಯಿ ನೀಡಬೇಕು ಇಲ್ಲವಾದ್ದಲ್ಲಿ ಅವರನ್ನು ಬೆದರಿಸಿ ಹಲ್ಲೆ ಮಾಡುತ್ತಾರೆ ಎಂದು ದೂರಿದ್ದಾರೆ.

    ದೂರಿನ ಹಿನ್ನಲೆಯಲ್ಲಿ ಚಂದ್ರಿಕಾ ದೇವಿ ಹಾಗೂ ಕುಟುಂಬಸ್ಥರು ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ಭಾಗಿಯಾದರೂ ಮತ್ತು ತನಿಖೆಗೆ ಸಹಕರಿಸುವುದಾಗಿ ಹೇಳಿಕೆ ನೀಡುರುವುದಾಗಿ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts