VIDEO| ರ್‍ಯಾಪಿಡೋ ಬೈಕ್​ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ದರ್ಪ ತೋರಿದ ಆಟೋ ಚಾಲಕ

Auto Driver Assault
Published on

ಬೆಂಗಳೂರು: ಕಳೆದ ಕಲವು ದಿನಗಳಿಂದ ರ್‍ಯಾಪಿಡೋ ಹಾಗೂ ಆಟೋ ಚಾಲಕರ ನಡುವಿನ ಗುದ್ದಾಟ ಜೋರಾಗುತ್ತಿದ್ದು ಈ ಮಧ್ಯೆ ಅದು ಗಿರಾಕಿಗಳ ಮೇಲೂ ಹಲ್ಲೆ ಶುರುವಾಗಿದೆ.

ಇದೀಗ ಪ್ರಕರಣ ಒಂದರಲ್ಲಿ ಆಟೋ ಚಾಲಕ ಒಬ್ಬ ಟೆಕ್ಕಿ ಒಬ್ಬರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​ ಆಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ ಸೆಕ್ಟರ್​-1ರಲ್ಲಿ ನಡೆದಿದೆ.

ದುಬಾರಿ ಮೊತ್ತ ಕೇಳಿದ ಚಾಲಕ

ಘಟನೆಯೂ ಬೆಳಗಿನ ಜಾವ 3:00 ಘಂಟೆಗೆ ನಡೆದಿದ್ದು ಅಜರ್​​ ಖಾನ್​ ಎಂಬುವವರು ತಮ್ಮ ಕೆಲಸ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದ ವೇಳೆ ಆಟೋವನ್ನು ಕರೆದಿದ್ದಾರೆ. ಈ ವೇಳೆ ಚಾಲಕ ದುಬಾರಿ ಮೊತ್ತ ಕೇಳಿದ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ ಮತ್ತು ರ್‍ಯಾಪಿಡೋ ಬೈಕ್​ ಬುಕ್​ ಮಾಡುವುದಾಗಿ ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಹಲ್ಲೆ

ಕುಡಿದ ಮತ್ತಿನಲ್ಲಿದ್ದ ಆರೋಪಿ ಆಟೋ ಚಾಲಕ ಇದನ್ನು ಕೇಳಿ ಕುಪಿತಗೊಂಡು ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಟೆಕ್ಕಿ ಮೇಲೇಳುವಷ್ಟರಲ್ಲೇ ಆಟೋ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ,

ಘಟನೆಯ ದೈಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಚ್​ಎಸ್​ಆರ್​ ಲೇಔಟ್​ ಠಾಣೆ ಪೊಲೀಸರು ಆರೋಪಿ ಆಟೋ ಚಾಲಕನಿಗೆ ಶೋಧ ಕಾರ್ಯ ನಡೆಸುತ್ತಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net