ಸಿನಿಮಾ

ಶಾಲೆಯ ಆವರಣದಲ್ಲೇ ಬಡಿದಾಡಿಕೊಂಡ ಮುಖ್ಯಶಿಕ್ಷಕಿ-ಸಹಾಯಕ ಶಿಕ್ಷಕಿ: ವಿಡಿಯೋ ವೈರಲ್​

ಪಟನಾ: ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿ ಶಾಲೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಟನಾ ಜಿಲ್ಲೆಯ ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ತಮ್ಮ ಶಾಲೆಯ ಇಬ್ಬರು ಶಿಕ್ಷಕಿಯರು ಕಿತ್ತಾಡುತ್ತಿದ್ದರೆ, ಶಾಲಾ ಮಕ್ಕಳ ಮೂಕಪ್ರೇಕ್ಷಕರಂತೆ ಜಡೆ ಜಗಳವನ್ನು ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶಾಲೆಯ ಒಳಗೆ ಆರಂಭವಾದ ಗಲಾಟೆ ಹೊರಗಿನ ಮೈದಾನದಲ್ಲೂ ಜೋರಾಗಿ ನಡೆದಿದೆ. ಕೆಳಗೆ ಬಿದ್ದುಕೊಂಡು ಮಣ್ಣಿನಲ್ಲೇ ಇಬ್ಬರು ಒದ್ದಾಡುತ್ತಾ ಗುದ್ದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಒಳಉಡುಪಿನಲ್ಲಿ ನೋಡುವ ಬಯಕೆಯಂತೆ! ಬಾಲಿವುಡ್​ ಚಿತ್ರರಂಗದ ಮತ್ತೊಂದು ಕರಾಳ ಕತೆ ಬಿಚ್ಚಿಟ್ಟ ಪಿಗ್ಗಿ

ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಶಾಲಾ ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಮತ್ತು ಮತ್ತೊಬ್ಬ ಶಿಕ್ಷಕಿ ಅನಿತಾ ಕುಮಾರಿ ನಡುವೆ ಈ ಗಲಾಟೆ ನಡೆದಿದೆ. ತರಗತಿಯಿಂದ ಒಬ್ಬರು ಹೊರಗೆ ಹೋಗುತ್ತಿರುವಾಗ ಮತ್ತೊಬ್ಬರು ಚಪ್ಪಲಿ ಹಿಡಿದುಕೊಂಡು ಓಡಿ ಬಂದು ಹೊಡೆದಾಗ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಮತ್ತೊಬ್ಬ ಮಹಿಳೆಯು ಕೂಡ ಹೊಡೆಯುತ್ತಿರುವುದು ವಿಡಿಯೋದಲ್ಲಿದೆ.

ಈ ಘಟನೆಯ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ ಎಂದು ಖಚಿತಪಡಿಸಿದರು. ಹಂಗಾಮಿ ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರೂ ಶಿಕ್ಷಕರಿಗೆ ವಿವರಣೆ ನೀಡಲು ಸಮನ್ಸ್ ನೀಡಲಾಗಿದೆ ಮತ್ತು ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಅಧಿಕೃತ ಸೂಚನೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. (ಏಜನ್ಸೀಸ್​)

ಹೊಸ ಸಂಸತ್​ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ: ಏನಿದರ ವಿಶೇಷತೆ?

ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?

ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಡಬಲ್​ ಮರ್ಡರ್​: ಬೆಚ್ಚಿಬಿದ್ದ ಧಾರವಾಡದ ಜನತೆ

Latest Posts

ಲೈಫ್‌ಸ್ಟೈಲ್