More

    ಚಿಕಿತ್ಸೆಗಾಗಿ ಬಿಸಿಲಿನಲ್ಲಿ 7ಕಿ.ಮೀ ನಡೆದು ಪ್ರಾಣ ಬಿಟ್ಟ ಗರ್ಭಿಣಿ!

    ಮುಂಬೈ: ಪ್ರಾಥಮಿಕ ಆರೋಗ್ಯ ಕೇಂದ್ರ(PHC)ಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಗರ್ಭಿಣಿ ಮಹಿಳೆ ಒಬ್ಬರು ಬಿಸಿಲಿನ ತಾಪಕ್ಕೆ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಿದೆ.

    ಸೋನಾಲಿ ವಾಘಾಟ್​(21) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಶುಕ್ರವಾರ ಮಧ್ಯಾಹ್ನ ದಹಾನು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ.

    7 ಕಿ.ಮೀ ನಡೆದ ಮಹಿಳೆ

    ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯಾಧಿಕಾರಿ ಸಂಜಯ್​ ಬಡೋಡೆ ಮೃತ ಮಹಿಳೆ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು 9 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಓಸರ್​ ವೀರ ಗ್ರಾಮದಿಂದ ಸಮೀಪದ ಹೆದ್ದಾರಿಗೆ 3.5ಕಿಲೋಮೀಟರ್​ ನಡೆದು ಬಂದಿದ್ದಾರೆ ಎಂದು ತಿಳಿದು ಬಂದಿದೆ.

    hospital

    ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ; ಆರೋಪಿ ಬಂಧನ

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಬಳಿಕ ಮಹಿಳೆ ತಮ್ಮ ಗ್ರಾಮಕ್ಕೆ ವಾಪಸ್​ ನಡೆದುಕೊಂಡು ಹೋಗಿದ್ದಾರೆ. ಸಂಜೆ ವೇಳೆಗೆ ಮಹಿಳೆಯ ಆರೋಗ್ಯ ಹದಗೆಟ್ಟಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಸಾವು

    ಮಹಿಳೆಯನ್ನು ಹತ್ತಿರದ ಆರೋಗ್ಯ ಕಕೇಂದ್ರಕ್ಕೆ ಸೇರಿಸಿದ ಕುಟುಂಬಸ್ಥರ ಬಳಿ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು ಅವರನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ಧಾರೆ.

    ಬೇರೊಂದು ಆಸ್ಪತ್ರೆ ತಲುಪುವ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ ಎಂದು ವೈದ್ಯಾಧಿಕಾರಿ ಸಂಜಯ್​ ಬಡೋಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts