More

    ಮಂಗಳೂರಲ್ಲಿ ಗೂಡ್ಸ್​ ರೈಲು ಡಿಕ್ಕಿ ಹೊಡೆದು 17 ಎಮ್ಮೆಗಳು ಮೃತ್ಯು

    ಮಂಗಳೂರು: ಭಾನುವಾರ ತಡರಾತ್ರಿ ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್​ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 17 ಎಮ್ಮೆಗಳು ಸೇರಿದಂತೆ 20 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

    ಕಂಕನಾಡಿ ಕಡೆಯಿಂದ ಮಂಗಳೂರು ಕೆಮಿಕಲ್ಸ್​ ಅಂಡ್ ಫರ್ಟಿಲೈಸರ್ಸ್​ ಕಡೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

    ಮಲಗಿದ್ದ ವೇಳೆ ಹಾದು ಹೋಗಿರಬಹುದು

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಒಬ್ಬರು ತೋಕೂರಿನಿಂದ ಕೇರಳದ ಪಣಂಬೂರಿಗೆ ಸರಕು ಸಾಗಾಣೆ ರೈಲಿನ ಹಳಿ ಇದೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಗೂಡ್ಸ್​ ರೈಲು ಸಾಗುವಾಗ ಹಾರ್ನ್​ ಹೊಡೆಯುತ್ತಾರೆ.

    ಬಹುಶಃ ಎಮ್ಮೆಗಳು ರೈಲ್ಚೆ ಹಳಿ ಮೇಲೆ ಮಲಗಿದ್ದ ಸಮಯದಲ್ಲಿ ರೈಲು ಹಾದು ಹೋಗಿರಬಹುದು. 2021ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ 13 ಎಮ್ಮೆಗಳು ಸತ್ತಿದ್ದವು ಎಂದು ತಿಳಿಸಿದ್ದಾರೆ.

    buffalo death

    ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!

    ಅತಿಯಾದ ಮಳೆ

    ಶನಿವಾರ ಈ ಪ್ರದೇಶದಲ್ಲಿ ಬಾರಿ ಮಳೆಯಾದ ಕಾರಣ ರೈಲ್ವೆ ಹಳಿ ಬಳಿ ಕೆಸರು ನಿಂತಿತ್ತು. ಎಮ್ಮೆಗಳು ಹೆಚ್ಚಾಗಿ ಕೆಸರಿನ ಬಳಿ ಹೆಚ್ಚಾಗಿ ಮಲಗುತ್ತವೆ. ರೈಲು ಹಾರ್ನ್​ ಹೊಡೆಯುತ್ತಾ ಬಂದರೂ ಸಹ ಎಮ್ಮೆಗಳು ಮೇಲೇಳುವುದಿಲ್ಲ ಆಗ ಈ ಘಟನೆ ನಡೆದಿರಬಹುದು ಎಂದು ರೈಲ್ಷೆ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಎಮ್ಮೆ ಹಾಗೂ ಜಾನುವಾರುಗಳ ಮೃತದೇಹಗಳನ್ನು ಹೊರತೆಗೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts