

ಅಮೃತಸರ: ಕುಡಿದ ಮತ್ತಿನಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಮೃತಸರ ಪೊಲೀಸರು ವ್ಯಕ್ತಿ ಓರ್ವನನ್ನು ಬಂಧಿಸಿದ್ದಾರೆ.
ಘಟನೆಯೂ ದುಬೈ-ಅಮೃತಸರ ವಿಮಾನದಲ್ಲಿ ಘಟನೆ ನಡೆದಿದ್ದು ವ್ಯಕ್ತಿಯೂ ತೀವ್ರ ಪಾನಮತ್ತನಾಗಿದ್ದ ವೇಳೆ ಕೃತ್ಯ ಎಸಗಿದ್ಧಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಬಂಧಿತ ಆರೋಪಿಯನ್ನು ರಾಜಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು ಜಲಂಧರ್ನ ಕೋಟ್ಲಿ ಗ್ರಾಮದವನು ಎಂದು ತಿಳಿದು ಬಂದಿದೆ.
ಆರೋಪಿ ಗಗನಸಖಿಗೆ ಕಿರುಕುಳ ನೀಡಿದ ವೇಳೆ ಮಹಿಳೆ ಇದನ್ನು ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಹಲವು ಬಾರಿ ಸೂಚನೆ ನೀಡಿದರ ಹೊರತಾಗಿಯೂ ಮಾತು ಕೇಳದೆ ಇದ್ದ ವೇಳೆ ಕಂಟ್ರೋಲ್ ರೂಮ್ಗೆ ವಿಚಾರವನ್ನು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಶ್ರೀ ಗುರು ರಾಮ್ದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.
ಬಂಧಿತ ಆರೋಪಿ ರಾಜಿಂದರ್ ಸಿಂಗ್ ವಿರುದ್ಧ ಪೊಲೀಸರು ಭಾರತ ದಂಡ ಸಂಹಿತೆ(IPC Section) 354, 509 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.