More

    ಸಿನಿಮೀಯ ಶೈಲಿಯಲ್ಲಿ ಹೆರಿಗೆ ಮಾಡಲು ಮುಂದಾದ ನರ್ಸ್​; ಗರ್ಭಿಣಿ ಮೃತ್ಯು

    ಪಟ್ನಾ: ಬಾಲಿವುಡ್​ನ ಬ್ಲಾಕ್​ಬಸ್ಟರ್​ ಚಿತ್ರ 3 ಈಡಿಯಟ್ಸ್​ನಲ್ಲಿ ಬರುವ ಒಂದು ದೃಶ್ಯವನ್ನು ನಿಜ ಜೀವನದಲ್ಲಿ ಪುನರಾವರ್ತಿಸಲು ಹೋಗಿ ಗರ್ಭಿಣಿ ಒಬ್ಬರ ದಾರುಣ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮಾಲತಿ ದೇವಿ(22) ಎಂದು ಗುರುತಿಸಲಾಗಿದ್ದು, ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.

    ಪ್ರಕರಣದ ಹಿನ್ನಲೆ?

    ಸೋಮವಾರ ಸಂಜೆ ಮಾಲತಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಬಂಧಪಟ್ಟ ವೈದ್ಯೆ ಸೀಮಾ ಕುಮಾರಿ ರಜೆಯಲ್ಲಿದ್ದರು ಸಹ ಆಸ್ಪತ್ರೆಯ ಸಿಬ್ಬಂದಿ ಗರ್ಭಿಣಿಯನ್ನು ದಾಖಲಿಸಿಕೊಂಡಿದ್ದಾರೆ.

    Operation Theatre
    ಸಾಂದರ್ಭಿಕ ಚಿತ್ರ

    ಆಪರೇಷನ್​ ಥಿಯೇಟರ್​ಗೆ ಕರೆದೊಯ್ದ ಸಿಬ್ಬಂದಿ ಬಳಿಕ ವೈದ್ಯೆ ಸೀಮಾ ಕುಮಾರಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ನರ್ಸ್​ ಒಬ್ಬರಿಗೆ ವಿಡಿಯೋ ಕರೆ ಮಾಡಿದ ವೈದ್ಯೆ ಸೂಚನೆಗಳನ್ನು ನೀಡಿದ್ದಾರೆ. ಈ ವೇಳೆ ನರ್ಸ್​ ವೈದ್ಯೆ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡು​ ರಕ್ತನಾಳವನ್ನು ಕತ್ತರಿಸಿದ ಪರಿಣಾಮ ಮಾಲತಿ ದೇವಿ ಅವಳಿ ಮಕ್ಕಳಿಗೆ ಜನುಮ ನೀಡಿ ಪ್ರಾಣ ಬಿಟ್ಟಿದ್ದಾರೆ.

    ಇದನ್ನೂ ಓದಿ: VIDEO| ಹಾಲು ತರಲು ಹೋದ ವಕೀಲೆಯನ್ನು ಗುಂಡಿಕ್ಕಿ ಹತ್ಯೆ!

    ಪರಿಸ್ಥಿತಿ ವಿಕೋಪಕ್ಕೆ

    ಅವಳಿ ಮಕ್ಕಳಿಬ್ಬರು ಆರೋಗ್ಯಕರವಾಗಿದ್ದು, ತಾಯಿಯ ಮೃತಪಟ್ಟಿರುವ ವಿಚಾರ ತಿಳಿದು ಮಹಿಳೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಖಜಾಂಚಿ ಪೊಲೀಸ್ ಠಾಣೆಯ​ ಅಧಿಕಾರಿಗಳನ್ನು​ ಪರಿಸ್ಥಿತಿಯನ್ನು ಹತ್ತೋಟಿಗೆ ತಂದಿದ್ಧಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಖಜಾಂಚಿ ಪೊಲೀಸ್​ ಠಾಣಾಧಿಕಾರಿ ರಂಜಿತ್​ ಕುಮಾರ್ ಮೃತರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ನೀಡಿರುವ ದೂರನ್ನು ನಾವು ಸ್ವೀಕರಿಸಿದ್ದೇವೆ. ಪೂರ್ಣಿಯಾ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಗೆ ದೂರನ್ನು ರವಾನಿಸಲಾಗಿದ್ದು ಹೆರಿಗೆ ವೇಳೆ ನಿರ್ಲಕ್ಷ್ಯ ತೋರಿರುವ ಆಸ್ಪತ್ರೆ ಹಾಗು ಸಿಬ್ಬಂದಿ ವಿರುದ್ಧ FIR ದಾಖಲಿಸಲಾಗುವುದು ಎಂದು ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts