More

    ಆದಿಪುರುಷ್​ ಪ್ರೀ ರಿಲೀಸ್​ ಇವೆಂಟ್​; ಚಿತ್ರತಂಡ ಸಿಡಿಸಿದ ಪಟಾಕಿಯ ಒಟ್ಟು ಮೌಲ್ಯವೆಷ್ಟು ಗೊತ್ತಾ?

    ತಿರುಪತಿ: ​ಪ್ರಭಾಸ್, ಕೃತಿ ಸನೊನ್, ಸೈಫ್​ ಅಲಿ ಖಾನ್​​​ ನಟನೆಯ ಬಹು ನಿರೀಕ್ಷಿತ ಆದಿ ಪುರುಷ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಚಿತ್ರತಂಡವು ಅಂತಿಮ ಟ್ರೈಲರ್​​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದೆ.

    ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಸುಮಾರು 2.5 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

    Adi Purush Event
    ಆದಿಪುರುಷ್​ ಚಿತ್ರತಂಡ

    ಇದನ್ನೂ ಓದಿ: ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​

    ಮಂಗಳವಾರ ನಡೆದ ಟ್ರೈಲರ್ ಲಾಂಚ್​ ಮಾಡಿದ ವೇಳೆ ಚಿತ್ರತಂಡ ಸುಮಾರು 50 ಲಕ್ಷ ರೂ. ಮೌಲ್ಯದ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದೆ ಎಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ತಿರುಮಲ ದೇವಸ್ಥಾನದ ಅರ್ಚಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಚಿತ್ರವು ಜೂನ್​ 16ರಂದು ಜಾಗತಿಕವಾಗಿ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ತೆರೆ ಕಾಣಲಿದೆ. ಇದಕ್ಕೂ ಮುನ್ನ ಚಿತ್ರವು ಜೂನ್​ 13ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts