ತಿಮ್ಮಪ್ಪನ ಸನ್ನಿಧಿಯಲ್ಲೇ ನಟಿಗೆ ಮುತ್ತಿಟ್ಟ ಖ್ಯಾತ​ ನಿರ್ದೇಶಕ; ಕಿಡಿಕಾರಿದ ಭಕ್ತರು

Om Raut kisses Kriti Sanon
Published on

ತಿರುಪತಿ: ಪ್ರಭಾಸ್, ಕೃತಿ ಸನೊನ್, ಸೈಫ್​ ಅಲಿ ಖಾನ್​​​ ನಟನೆಯ ಬಹು ನಿರೀಕ್ಷಿತ ಆದಿ ಪುರುಷ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಚಿತ್ರತಂಡವು ಅಂತಿಮ ಟ್ರೈಲರ್​​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದೆ.

ಬುಧವಾರ ಚಿತ್ರದ ನಿರ್ದೇಶಕ ಓಂ ರಾವತ್​ ಹಾಗೂ ನಾಯಕಿ ಕೃತಿ ಸನೊನ್​ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆಧರೆ, ದೇವಸ್ಥಾನದ ಆವರಣದಲ್ಲಿ ಮಾಡಿದ ಆ ಒಂದು ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.

Om Raut kisses Kriti Sanon

ದೇವಸ್ಥಾನದಲ್ಲಿ ಚುಂಬನ

ಆದಿಪುರುಷ್​ ಚಿತ್ರತಂಡವು ಮಂಗಳವಾರ ನಡೆದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸಿನಿಮಾದ ಅಂತಿಮ ಟ್ರೈಲರ್​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳ ಜೋಶ್​ ಅನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರತಂಡವು ಬುಧವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ದೇವಸ್ಥಾನದಿಂದ ಹೊರಬಂದ ಬಳಿಕ ನಾಯಕಿ ಕೃತಿ ಸನೋನ್​ ಅವರನ್ನು ಕಳುಹಿಸಿ ಕೊಡುವ ವೇಳೆ ನಿರ್ದೇಶಕ ಓಂ ರಾವತ್​ ಅವರ ಕೆನ್ನೆಗೆ ಮುತ್ತು ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಕುರಿತು ಆಂಧ್ರಪ್ರದೇಶ ಬಿಜೆಪಿ ಕಾರ್ಯದರ್ಶಿ ರಮೇಶ್​ ನಾಯ್ಡು ನಗೋತು ಮೊದಲಿಗೆ ಟ್ವೀಟ್​​ ಮಾಡಿ ಆ ನಂತರ ಡಿಲೀಟ್​ ಮಾಡಿದ್ಧಾರೆ.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು, ಭಕ್ತರು ಚಿತ್ರತಂಡದ ಸದಸ್ಯರ ವರ್ತನೆಗೆ ಕಿಡಿಕಾರಿದ್ದು ಇದು ಶೋಭೆ ತರುವಂತದ್ದಲ್ಲ ಎಂದು ಹರಿಹಾಯ್ದಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net