More

    ಸರ್ಕಾರ ಕಾಲಾವಕಾಶ ಕೇಳಿದೆ, ಜೂನ್​ 15ರವರೆಗೆ ಪ್ರತಿಭಟನೆ ಮಾಡುವುದಿಲ್ಲ: ಕುಸ್ತಿಪಟುಗಳು

    ನವದೆಹಲಿ:  ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ರೀಡಾಪಟುಗಳು ದೆಹಲಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕುಸ್ತಿಪಟುಗಳಾದ ಬಜರಂಗ್​ ಪೂನಿಯಾ, ಸಾಕ್ಷಿ ಮಲಿಕ್​, ವಿನೇಶ್​ ಪೋಗಟ್ ಬುಧವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಇದನ್ನೂ ಓದಿ: ನೌಕರಿಗೆ ಹಾಜರಾಗಲು ಊರಿಗೆ ಹೊರಟ ಪ್ರತಿಭಟನಾನಿರತ ಕುಸ್ತಿಪಟುಗಳು

    ಪ್ರತಿಭಟನೆ ಮುಂದೂಡಿಕೆ

    ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕುಸ್ತಪಟುಗಳು ಪ್ರಮುಖವಾಗಿ ಐದು ಬೇಡಿಕೆಗಳನ್ನು ಮುಂದಿರಿಸಿದ್ದಾರೆ ಎಂಧು ತಿಳಿದು ಬಂದಿದೆ. ತಮ್ಮ ಷರತ್ತುಗಳನ್ನು ಒಪ್ಪಿದ್ದಲ್ಲಿ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ತನಿಖೆ ಪ್ರಗತಿಯಲ್ಲಿದ್ದು ಜೂನ್​ 15ರವರೆಗೆ ಕಾಲಾವಕಾಶವನ್ನು ಕೋರಲಾಗಿದೆ ಎಂದು ವರದಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸಾಕ್ಷಿ ಮಲ್ಲಿಕ್​ ತನಿಖೆ ಪ್ರಗತಿಯಲ್ಲಿದ್ದು ಜೂನ್​ 15ರವೆರೆಗೆ ಯಾವುದೇ ರೀತಿಯ ಪ್ರತಿಭಟನೆ ಮಾಡದಂತೆ ಹೇಳಲಾಗಿದೆ ಎಂದು ಸಚಿವರ ಜೊತೆ ಸಭೆಯ ನಂತರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts