More

    ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದ 7 ಷಟ್ಲರ್​ಗಳು; ಕನ್ನಡತಿ ಅಶ್ವಿನಿ ಪೊನ್ನಪ್ಪಗೂ ಅವಕಾಶ

    ನವದೆಹಲಿ: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಸಹಿತ 7 ಭಾರತೀಯ ಷಟ್ಲರ್​ಗಳು ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವುದು ಸೋಮವಾರ ಅಧಿಕೃತಗೊಂಡಿದೆ. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ ಫೆಡರೇಷನ್​ನ ಒಲಿಂಪಿಕ್ಸ್​ ಅರ್ಹತಾ ರ್ಯಾಂಕಿಂಗ್​ ಅನ್ವಯ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಲು ಸೋಮವಾರ ಅಂತಿಮ ಗಡುವು ಆಗಿತ್ತು. ಹೀಗಾಗಿ ಸಿಂಧು ಜತೆಗೆ ಪುರುಷರ ಸಿಂಗಲ್ಸ್​ನಲ್ಲಿ ಎಚ್​ಎಸ್​ ಪ್ರಣಯ್​ ಮತ್ತು ಲಕ್ಷ್ಯ ಸೇನ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವುದು ಖಚಿತಗೊಂಡಿದೆ.

    ಒಲಿಂಪಿಕ್ಸ್​ ಅರ್ಹತಾ ರ್ಯಾಂಕಿಂಗ್​ ಅನ್ವಯ ಸಿಂಗಲ್ಸ್​ ವಿಭಾಗದಲ್ಲಿ ಅಗ್ರ 16 ಷಟ್ಲರ್​ಗಳಿಗೆ ಅರ್ಹತೆ ನೀಡಲಾಗಿದೆ. ಮಹಿಳಾ ಸಿಂಗಲ್ಸ್​ನಲ್ಲಿ ಸಿಂಧು 12ನೇ ಸ್ಥಾನದಲ್ಲಿದ್ದರೆ, ಪುರುಷರ ಸಿಂಗಲ್ಸ್​ನಲ್ಲಿ ಪ್ರಣಯ್​ ಮತ್ತು ಲಕ್ಷ$್ಯ ಕ್ರಮವಾಗಿ 9 ಮತ್ತು 13ನೇ ಸ್ಥಾನದಲ್ಲಿದ್ದಾರೆ.

    ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಹಾಗೂ ಮಹಿಳಾ ಡಬಲ್ಸ್​ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೋ ಜೋಡಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದೆ. ಮಹಿಳಾ ಡಬಲ್ಸ್​ನಲ್ಲಿ ತ್ರಿಸಾ ಜೋಲಿ&ಗಾಯತ್ರಿ ಗೋಪಿಚಂದ್​ ಜೋಡಿ ಅರ್ಹತೆಯಿಂದ ವಂಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts