More

    ಕೇಂದ್ರ ಕ್ರೀಡಾ ಸಚಿವರ ಮುಂದೆ ಪ್ರಮುಖ 5 ಬೇಡಿಕೆಗಳನ್ನಿಟ್ಟ ಪ್ರತಿಭಟನಾ ನಿರತ ಕುಸ್ತಿಪಟುಗಳು

    ನವದೆಹಲಿ: ಇಂದು (ಜೂ. 7) ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರನ್ನು ಭೇಟಿ ಮಾಡಿ, ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಮಾತುಕತೆ ನಡೆಸಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು ಪ್ರಮುಖ ಐದು ಬೇಡಿಕೆಗಳನ್ನು ಸಚಿವರು ಮುಂದಿಟ್ಟಿದ್ದಾರೆ.

    ಬೇಡಿಕೆಗಳನ್ನು ಈಡೇರಿಸಿದರೆ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಕುಸ್ತಿಪಟುಗಳು ಕ್ರೀಡಾ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ. ಪ್ರಮುಖ ಕುಸ್ತಿಪಟುಗಳಿಗೆ ಸಚಿವ ಅನುರಾಗ್​ ಠಾಕೂರ್​ ಅವರು ತಡರಾತ್ರಿ ಆಹ್ವಾನವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭಜರಂಗ್​ ಪೂನಿಯಾ, ಸಾಕ್ಷಿ ಮಲ್ಲಿಕ್​, ಫೋಗಟ್ ಮತ್ತು ಸತ್ಯವರ್ತ್ ಕಡಿಯನ್ ಭೇಟಿ ನೀಡಿದ್ದರು. ಕುಸ್ತಿಪಟುಗಳಿಗೆ ರೈತ ನಾಯಕ ರಾಕೇಶ್​ ಟಿಕಾಯತ್​ ಅವರು ಕೂಡ ಸಾಥ್​ ನೀಡಿದ್ದರು.

    ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪರಿಸ್ಥಿತಿ ಉದ್ವಿಗ್ನ

    ಕೇಂದ್ರ ಕ್ರೀಡಾ ಸಚಿವರ ಮುಂದೆ ಕುಸ್ತಿಪಟುಗಳು ಇಟ್ಟಿರುವ ಐದು ಪ್ರಮುಖ ಬೇಡಿಕೆಗಳು ಈ ಕೆಳಕಂಡಂತಿವೆ.
    1. ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಳ್ಳಬೇಕು.
    2. ಆರೋಪಿ ಬ್ರಿಜ್​ ಭೂಷಣ್​ ಸಿಂಗ್​ ಆಗಲಿ ಅಥವಾ ಅವರ ಕುಟುಂಬ ಯಾರೊಬ್ಬರು ಕೂಡ ಕುಸ್ತಿ ಒಕ್ಕೂಟದ ಭಾಗವಾಗಬಾರದು.
    3. ಬ್ರಿಜ್​ ಅವರ ನಾಯಕತ್ವದ ಮೇಲೆ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪ ಇರುವುದರಿಂದ ಪ್ರತಿಭಟನೆಯಲ್ಲಿರುವ ಕುಸ್ತಿಪಟುಗಳು ಕುಸ್ತಿ ಒಕ್ಕೂಟಕ್ಕೆ “ಮುಕ್ತ ಮತ್ತು ನ್ಯಾಯಯುತ” ಚುನಾವಣೆಗೆ ಒತ್ತಾಯ.
    4. ಏಪ್ರಿಲ್ 28ರಂದು ಜಂತರ್ ಮಂತರ್‌ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್​ಗಳನ್ನು ಹಿಂಪಡೆಯಬೇಕು ಎಂದು ಕುಸ್ತಿಪಟುಗಳು ಆಗ್ರಹ.
    5. ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬ್ರಿಜ್​ ಭೂಷಣ್​ ಸಿಂಗ್​ ಅವರು ಬಂಧಿಸಬೇಕೆಂದು ಕುಸ್ತಿಪಟುಗಳ ಒತ್ತಾಯ.

    ಬ್ರಿಜ್​ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದಾರೆ. ಕುಸ್ತಿ ಒಕ್ಕೂಟದ ಮೂರರಿಂದ ನಾಲ್ಕು ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಸಿಂಗ್ ಅವರ ದೆಹಲಿ ನಿವಾಸದಲ್ಲಿ ಕೆಲವು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ನನ್ನ ನಿನ್ನೆ, ಇಂದು, ನಾಳೆಗಳು ನೀನೆ…ಚಿರು ಪುಣ್ಯತಿಥಿಯಂದು ಭಾವುಕರಾದ ಮೇಘನಾ ರಾಜ್

    ಅನ್ನ ತಿಂದು ಮುಗಿಸುವ ಮುನ್ನವೇ ಪಾಯಸ ಬಡಿಸಿದ್ದಕ್ಕೆ ರಣಾಂಗಣವಾದ ಕಲ್ಯಾಣ ಮಂಟಪ!

    ಮರದ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಇಬ್ಬರು ಮಕ್ಕಳ ಶವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts