ಮರದ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಇಬ್ಬರು ಮಕ್ಕಳ ಶವ

wooden box
Published on

ದೆಹಲಿ: ಮರದ ಪೆಟ್ಟಿಗೆಯೊಳಗೆ ಇಬ್ಬರು ಮಕ್ಕಳ ಶವ ಪತ್ತೆಯಾಗಿರುವ ಘಟನೆ ದೆಹಲಿಯ ಜಾಮಿಯಾ ಪ್ರದೇಶದಲ್ಲಿ ನಡೆದಿದೆ.

ನೀರಜ್(8) ಮತ್ತು ಆರತಿ(6) ಎಂಬ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದು, ಇವರು ತಮ್ಮ ತಂದೆ ಬಲ್ಬೀರ್​ ಜತೆಗೆ ವಾಸವಾಗಿದ್ದರು.

ಮೃತ ಮಕ್ಕಳು ಮಂಗಳವಾರ ಮಧ್ಯಾಹ್ನ ಊಟವಾದ ಬಳಿಕ 3.30ರ ಸುಮಾರಿಗೆ ನಾಪತ್ತೆಯಾಗಿದ್ದರು. ಕೂಡಲೇ ಪಾಲಕರು ಹಾಗೂ ನೆರೆಹೊರೆಯವರು ಮಕ್ಕಳನ್ನು ಹುಡುಕಾಡಿದ್ದಾರೆ. ಕೊನೆಗೆ, ಎಲ್ಲೂ ಕಾಣದಿದ್ದಾಗ ಮನೆಯಲ್ಲಿನ ಮರದ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ಸುದ್ದಿಯನ್ನು ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸರು, ಮಕ್ಕಳ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಇಬ್ಬರು ಆಟವಾಡುತ್ತಿದ್ದ ವೇಳೆ ಮರದ ಪೆಟ್ಟಿಗೆಯೊಳಗೆ ಆಕಸ್ಮಿಕವಾಗಿ ಸಿಕ್ಕಿಬಿದ್ದು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net