ಸದನದಲ್ಲಿ ಸದ್ದು ಮಾಡಿದ ಪ್ರವೀಣ್ ನೆಟ್ಟಾರ್, ಹರ್ಷ ಹತ್ಯೆ ಪ್ರಕರಣ…

praveen nettar harsha
Published on

ಬೆಂಗಳೂರು: ಇದೀಗ ಸದನದಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ವಿಚಾರ ಸದ್ದು ಮಾಡುತ್ತಿದ್ದು ಪ್ರವೀಣ್ ನೆಟ್ಟಾರ್​ ಹಾಗೂ ಹರ್ಷ ಕೊಲೆ ಪ್ರಕರಣಗಳ ಪ್ರಸ್ತಾಪ ನಡೆದಿದೆ.

ರಾಜ್ಯಪಾಲ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ನಂತರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ, "ಪ್ರವೀಣ್ ಹತ್ಯೆ ಹರ್ಷ ಕೊಲೆ ಪ್ರಕರಣವನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಬಿಡಬೇಕು. ಇಂತಹ ಘಟನೆಗಳ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ.

ಪರೇಶ್ ಮೇಸ್ತ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿದ ಕಾರಣ ಕಾಂಗ್ರೆಸ್​ಗೆ ಕೆಲವು ಕಡೆ ಹಿನ್ನಡೆ ಆಗಿದೆ. ಆದರೆ ಸಿಬಿಐ ತನಿಖೆಯಲ್ಲಿ ಅದು ಕೊಲೆ ಅಲ್ಲ ಎಂದು ವರದಿ ಬಂದಿದೆ. ನಾವು ಹಿಂದುಗಳಲ್ವಾ? ಯಾರೇ ಯಾರನ್ನು ಸಾಯಿಸಿದೂ ಅವರ ವಿರುದ್ಧ ಕ್ರಮ ಆಗಲಿ. ಕಾಂಗ್ರೆಸ್ ನವರು ಕೊಲೆ ಮಾಡಿದ್ದಾರೆ ಎಂಬು ಬಿಂಬಿಸುವುದು ಸರಿಯಲ್ಲ. ಹರ್ಷ ಕೊಲೆಯ ಸಂದರ್ಭದಲ್ಲಿ ಕರ್ಫ್ಯೂಯಿಂದ ಜನರು ಸಂಕಷ್ಟಕ್ಕೆ‌ ಒಳಗಾದರು.

ಅವರ ಸಾವನ್ನು ಕೊಲೆ ಎಂದು ಬಿಂಬಿಸಿ ಚುನಾವಣಾ ಲಾಭ ಪಡೆದರು. ಕಾಂಗ್ರೆಸ್ ಮೇಲೂ, ಒಂದು ಸಮುದಾಯದ ಮೇಲೂ ಆರೋಪ ಮಾಡಿದರು. ಕೊಲೆ ಯಾರೇ ಮಾಡಿರಲಿ, ಅದು ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೇ ಇದ್ರೂ ಕ್ರಮ ಆಗಲಿ. ನಿಮ್ಮದೇ ಸರ್ಕಾರ ಇತ್ತು, ಕೊಲೆಗಡುಕರಿಗೆ ಯಾಕೆ ಶಿಕ್ಷೆ ಕೊಡಲಿಲ್ಲ?

ತನಿಖೆಗಿಂತಲೂ ಅದನ್ನು ತಮಗೆ ಬೇಕಾದಂತೆ ಬಿಂಬಿಸಿ ಲಾಭ ಪಡೆಯುವತ್ತ ನಿಮ್ಮ ಗಮನ ಇತ್ತು" ಎಂದು ಬಿಜೆಪಿ ವಿರುದ್ಧ ಬೇಳೂರು ಗೋಪಾಲಕೃಷ್ಣ ಟೀಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net