More

    ಎದೆಮಟ್ಟ ನೀರಿದ್ದರೂ ವಿದ್ಯುತ್​ ಕಂಬ ಏರಿ ರಿಪೇರಿ ಕಾರ್ಯ ನಡೆಸಿದ ಮೆಸ್ಕಾಂ ಸಿಬ್ಬಂದಿ!

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಯಾವಮಟ್ಟಿಗೆ ಮಳೆಯಾಗುತ್ತಿದೆ ಎಂದರೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಕೆಲವೆಡೆ ಮಳೆ ಕಾರಣ ವಿದ್ಯುತ್​ ಸಮಸ್ಯೆ ತಲೆದೋರಿದ್ದು ಲೈನ್​ ಮ್ಯಾನ್​ಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಲೈನ್ ಮ್ಯಾನ್ ಒಬ್ಬರು ಧೈರ್ಯದಿಂದ ಮಾಡಿದ್ದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಈ ಲೈನ್​ ಮ್ಯಾನ್​, ನೆರೆ ನೀರಿನಲ್ಲಿ ಎದೆ ಮಟ್ಟದ ತನಕ ಮುಳುಗಿದ್ದರೂ ವಿದ್ಯುತ್ ತಂತಿ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆ ಮಂಗಳೂರಿನ ಹೊರ ವಲಯದ ದೇರಳಕಟ್ಟೆಯಲ್ಲಿ ನಡೆದಿದೆ.

    ಇಂದು ಭಾರೀ ಮಳೆಗೆ ವಿದ್ಯುತ್ ಕೈಕೊಟ್ಟು 40ರಷ್ಟು ಮನೆಗಳಿಗೆ ಕರೆಂಟ್ ಇಲ್ಲದಾಗಿತ್ತು. ಅದಲ್ಲದೇ ವಿದ್ಯುತ್ ಕಂಬದ ಸುತ್ತ ಎದೆ ಮಟ್ಟಕ್ಕೆ ನೀರು ನಿಂತಿದ್ದರಿಂದ ರಿಪೇರಿ ಕಾರ್ಯಕ್ಕೆ ಇಳಿಯುವವರಿಗೆ ಶಾಕ್​ ಹೊಡೆಯುವ ಅಪಾಯ ಇತ್ತು. ಆದರೂ ಜನರ ಮನೆಗಳಿಗೆ ವಿದ್ಯುತ್ ತಲುಪಲಿ ಎನ್ನುವ ಉದ್ದೇಶದಿಂದ ಧೈರ್ಯದಿಂದ ಇವರು ನೀರಿನಲ್ಲೇ ಹೋಗಿ ವಿದ್ಯುತ್ ತಂತಿ ಸರಿಪಡಿಸಿದ್ದಾರೆ. ಮೆಸ್ಕಾಂ ಸಿಬಂದಿಯ ಕಾರ್ಯ ತತ್ಪರತೆಗೆ ಸಾರ್ವಜನಿಕರು ಪ್ರಶಂಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts