More

    ಚಾಮರಾಜನಗರ ಜಿಲ್ಲೆ ಇಂಡಿಗನತ್ತದಲ್ಲಿ ಏ.29ಕ್ಕೆ ಮರು ಮತದಾನ

    ಬೆಂಗಳೂರು: ಚಾಮರಾಜನಗರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಇಂಡಿನಗತ್ತ ಗ್ರಾಮದಲ್ಲಿ ಏ.29 ರಂದು ಮರುಮತದಾನ ನಡೆಯಲಿದೆ.

    ಈ ಗ್ರಾಮದಲ್ಲಿ ಶುಕ್ರವಾರ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೂಲಸೌಕರ್ಯ ಕೊರತೆ ಕಾರಣ ಮುಂದಿಟ್ಟು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಇದರಿಂದ ಮತಗಟ್ಟೆಯಲ್ಲಿ ಜಟಾಪಟಿ ನಡೆದಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಜತೆಗೆ ಇವಿಎಂ ಮಶೀನ್‌ಗಳನ್ನು ಪುಡಿ ಪುಡಿ ಮಾಡಲಾಗಿತ್ತು. ಹಾಗಾಗಿ ಚಾಮರಾಜನಗರದ 146ನೇ ಬೂತ್‌ನಲ್ಲಿ ಮತದಾನವೇ ನಡೆದಿರಲಿಲ್ಲ. ಈಗ ಇಂಡಿಗನತ್ತ ವಾರ್ಡ್ ವ್ಯಾಪ್ತಿಯಲ್ಲಿ ಮರು ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಏ.29 ರಂದು ಚಾಮರಾಜನಗರದ ಒಂದು 146ನೇ ಬೂತ್‌ನಲ್ಲಿ ಮರು ಮತದಾನ ನಡೆಯಲಿದೆ.

    ಏ.29 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಮರು ಮತದಾನಕ್ಕೆ ಚುನಾವಣಾ ಆಯೋಗ ಭದ್ರತೆ ಸೇರಿದಂತೆ ಎಲ್ಲ ಸಿದ್ಧತೆ ನಡೆಸಿದೆ. ಹೊಸ ಇವಿಎಂ ಮಶೀನ್‌ಗಳನ್ನು ತರಿಸಲಾಗಿದೆ. ಇಂಡಿಗನತ್ತ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕೆ ಜನಪ್ರತಿನಿಧಿಗಳಿಗೆ ಭೇಡಿ ಇಟ್ಟಿದ್ದರು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಗ್ರಾಮಸ್ಥರಿಗೆ ಯಾವುದೇ ಸೌಕರ್ಯ ಇದುವರೆಗೆ ಸಿಕ್ಕಿಲ್ಲ. ಹೀಗಾಗಿ ಈ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.

    ಮತದಾನ ಬಹಿಷ್ಕರಿಸಿದ್ದರಿಂದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮತದಾನ ಬಹಿಷ್ಕರಿಸದಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ 20 ಹಾಡಿಗಳ ಜನ ಮತದಾನಕ್ಕೆ ಆಗಮಿಸಿದ್ದರು. ಇದರಿಂದ ವಾಗ್ವಾದ ನಡೆದಿತ್ತು. ಪರಿಸ್ಥಿತಿ ಹತೋಟಿ ತಪ್ಪುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಸ್ಥರು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts