More

    ಚುನಾವಣೆ ಪ್ರಚಾರ ವೇಳೆ ವಾಗ್ವಾದ

    ಮಂಗಳೂರು: ಉರ್ವಾ ಚಿಲಿಂಬಿಯ ಸಾಯಿಮಂದಿರದ ಬಳಿ ಚುನಾವಣೆ ಪ್ರಚಾರ ನಡೆಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ್ದಲ್ಲದೆ, ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆದಿದೆ.

    ಮಂಗಳೂರಿನ ಸಾಯಿ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. ಇದೇ ವೇಳೆ, ಮಂದಿರದ ಎದುರಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತ ತೆರಳುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಹೇಳಿದ್ದು ವಾಗ್ವಾದಕ್ಕೆ ಕಾರಣ.

    *ಕಾಂಗ್ರೆಸ್-ಬಿಜೆಪಿ ನಾಯಕರ ಬೇಟಿ

    ಘಟನೆ ನಡೆದ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರು ಸೇರಿದ್ದು, ಪರಸ್ಪರ ವಾಗ್ವಾದ ನಡೆಸಿದ್ದಾರೆ. ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ನೀವು ಯಾರು ಹೇಳೋಕೆ ಎಂದು ಬಿಜೆಪಿಯವರು ಪ್ರಶ್ನಿಸಿದರೆ, ಇಲ್ಲಿ ಪ್ರಚಾರ ಮಾಡಲಿಕ್ಕಿಲ್ಲ. ನಾವು ಮಾಡೋದಿಲ್ಲ. ಮಂದಿರದಲ್ಲಿ ರಾಜಕೀಯ ಇಲ್ಲ ಎಂದಿದ್ದಾರೆ. ನಾವು ಒಳಗಡೆ ಪ್ರಚಾರ ಮಾಡ್ತಾ ಇಲ್ಲ. ಹೊರಗಿನಿಂದ ನಾವು ಹೋಗ್ತಾ ಇದ್ದರೆ ನೀವು ಯಾಕೆ ಅಡ್ಡಿ ಬಂದಿದ್ದು ಎಂದು ವಾಗ್ವಾದ ಮಾಡಿದ್ದಾರೆ. ಹೊಯ್ ಕೈ ಆಗುತ್ತೆ ಎನ್ನುವಾಗ ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ಥಳಕ್ಕಾಗಮಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದರು. ಉರ್ವಾ ಇನ್ಸ್‌ಪೆಕ್ಟರ್ ಭಾರತಿ ಘಟನಾ ಸ್ಥಳಕ್ಕೆ ಆಗಮಿಸಿ ಸೇರಿದ್ದ ಜನರನ್ನು ಚದುರಿಸಿಸದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts