ನವದೆಹಲಿ: ಬಾಂಗ್ಲಾದೇಶದ ಪ್ರಧಾನಿಯಾಗಿ 15 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ ಬಲಿಷ್ಠ ನಾಯಕರಲ್ಲಿ ಒಬ್ಬರೆನ್ನಿಸಿಕೊಂಡಿದ್ದ ಶೇಖ್ ಹಸೀನಾ ಅವರ ಬಗ್ಗೆ ಈ ಹಿಂದೆ ಖ್ಯಾತ ಜ್ಯೋತಿಷಿ ಒಬ್ಬರು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದ್ದು, ಇವರು ಹೇಳಿರುವಂತೆ ನಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ನುಡಿದಿರುವ ಭವಿಷ್ಯ ನಿಜವಾಗಿದ್ದು, ಇದೀಗ ಪ್ರಶಾಂತ್ ಅವರೇ ಭಾರತ ಹಿಂದೂ ರಾಷ್ಟ್ರ ಆಗುತ್ತದ ಇಲ್ಲವಾ ಎಂಬುದರ ಕುರಿತು ಭವಿಷ್ಯ ನುಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗುತ್ತಿದ್ದಂತೆ ಹಲವರು ಭಾರತ ಹಿಂದೂ ರಾಷ್ಟ್ರ ಆಗುತ್ತದ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಕಿಣಿ ಭಾರತ ಹಿಂದೂ ರಾಷ್ಟ್ರ ಆಗುವುದಿಲ್ಲ ಎಂದು ಹೇಳಿ 07 ಕಾರಣಗಳನ್ನು ನೀಡಿದ್ದಾರೆ. ಈ ವಿಚಾರ ಹೊಸ ಚರ್ಚಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಪತಿ ಬೈದ ಎಂಬ ಕಾರಣಕ್ಕೆ ಮೂರನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಪತ್ನಿ; ವಿಡಿಯೋ ವೈರಲ್
ಭಾರತ ಹಿಂದೂ ರಾಷ್ಟ್ರವಾಗುತ್ತಾ ಎಂದು ಜನರು ನನ್ನನ್ನು ಕೇಳುತ್ತಾರೆ. ನನ್ನ ಪ್ರಕಾರ ಎಂದಿಗೂ ಇಲ್ಲ ಎಂದು ಹೇಳುತ್ತೇನೆ. ಏಕೆಂದರೆ ಹಿಂದೂಗಳಲ್ಲಿ ಏಕತೆ ಇಲ್ಲ, ಹಿಂದೂಗಳನ್ನು ಜಾತಿ ಆಧಾರದ ಮೇಲೆ ವಿಂಗಡಿಸಲಾಗಿದೆ, ಎಲ್ಲಾ ಹಾರ್ಡ್ಕೋರ್ ಹಿಂದೂ ರಾಜಕಾರಣಿಗಳು ಗೆದ್ದ ನಂತರ ಅಲ್ಟ್ರಾ ಸೆಕ್ಯೂಲರ್ ಆಗುತ್ತಾರೆ, ಹಿಂದೂಗಳ ಪರ ಎನ್ನುವ ಬಿಜೆಪಿ ಅವರ ಪರ ಇಲ್ಲ, ಅಸ್ತಿತ್ವದಲ್ಲಿರುವ ಹಿಂದೂ ರಾಷ್ಟ್ರದ (ಕೇರಳ ಪಶ್ಚಿಮ ಬಂಗಾಳ ಅಸ್ಸಾಂ) ಭಾಗಗಳನ್ನು ಕಳೆದುಕೊಳ್ಳುವ ಹಾದಿಯಲ್ಲಿ, ಹಿಂದೂ ರಾಷ್ಟ್ರದ ಕನಸಿಗೆ ಅಂತ್ಯ ಎಂದು 07 ಕಾರಣಗಳನ್ನು ನೀಡಿದ್ದಾರೆ.
ಇತ್ತ ಪ್ರಶಾಂತ್ ಕಿಣಿ ಅವರ ಟ್ವೀಟ್ಗೆ ನೆಟ್ಟಿಗರು ಪರ-ವಿರೋಧದ ಕಮೆಂಟ್ ಹಾಕಿದ್ದು, ಕೆಲವರು ಪ್ರಸ್ತುತ ಸ್ಥಿತಿಯನ್ನು ನೋಡಿ ನೀವು ಈ ರೀತಿ ಹೇಳುತ್ತಿದ್ದೀರಾ. ಇಲ್ಲ ನಿಮ್ಮ ಭವಿಷ್ಯಾವಾಣಿ ಸುಳ್ಳಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.