ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಜೂನ್ ತಿಂಗಳಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಸೂಪರ್ 08 ಹಂತ ಪ್ರವೇಶಿಸಲು ವಿಫಲವಾಗಿ ಹೊರಬಿದ್ದ ಪಾಕ್ ತಂಡದ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದರು ಮತ್ತು ತಂಡದ ಸಂಯೋಜನೆಯನ್ನೇ ಸಂಪೂರ್ಣವಾಗಿ ಬದಲಿಸುವಂತೆ ಆಗ್ರಹಿಸಿದ್ದರು. ಇದೀಗ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳು ಜಿಂಬಾಬ್ವೆ ಆಟಗಾರನಿಗೆ ತಮ್ಮ ದೇಶದ ಪರ ಆಡುವಂತೆ ಮನವಿ ಮಾಡಿದ್ದು, ಆಟಗಾರ ನೀಡಿದ ಉತ್ತರ ಎಲ್ಲರ ಮನಗೆಲ್ಲುತ್ತಿದೆ.
ಜಿಂಬಾಬ್ವೆ ತಂಡದ ಆಲ್ರೌಂಡರ್ ಸಿಕಂದರ್ ರಾಜಾ ಒಬ್ಬ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಿದರೆ ತಪ್ಪಾಗಲಾರದು. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಿಕಂದರ್ ರಾಜಾ ಈವರೆಗೂ ಲ ಪ್ರವೇಶದಿಂದ, ರಾಝಾ 17 ಟೆಸ್ಟ್, 142 ODI ಮತ್ತು 91 T20 ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ಮತ್ತು ಪಿಎಸ್ಎಲ್ನಲ್ಲೂ ಆಡಿ ಸಾಕಷ್ಟು ಖ್ಯಾತಿ ಗಳಿಸಿರುವ ರಾಜಾ ಮೂಲತಃ ಪಾಕಿಸ್ತಾನದ ಸಿಯಾಲ್ಕೋಟ್ನವರು. ಈ ಬಗ್ಗೆ ತಿಳಿದ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳು ರಾಜಾಗೆ ತಮ್ಮ ದೇಶದ ಪರ ಆಡುವಂತೆ ಮನವಿ ಮಾಡಿದ್ದು, ಇದಕ್ಕೆ ರಾಜಾ ನೀಡಿದ ಉತ್ತರ ಎಲ್ಲರ ಮನಗೆಲ್ಲುತ್ತಿದೆ.
ಇದನ್ನೂ ಓದಿ: ಸೆಮಿಫೈನಲ್ನಲ್ಲಿ ಭಾರತಕ್ಕೆ ಜರ್ಮನಿ ಆಘಾತ; ಇನ್ನೂ ಇದೆ ಪದಕ ಗೆಲ್ಲುವ ಚಾನ್ಸ್
ನೀವು ಎಂದಾದರೂ ಪಾಕಿಸ್ತಾನದ ಪರ ಆಡುವ ಬಗ್ಗೆ ಯೋಚಿಸಿದ್ದೀರಾ. ನೀವು ನಮ್ಮ ದೇಶದ ಪರ ಆಡಲು ಶುರು ಮಾಡಿದರೆ ಮಧ್ಯಮ ಕ್ರಮಾಂಕದಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ನೀವು ಪರಿಹಾರ ನೀಡಬಹುದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಜಾ ನಾನು ಹುಟ್ಟು ಪಾಕಿಸ್ತಾನಿಯಾಗಿದ್ದು, ಜಿಂಬಾಬ್ವೆ ಕ್ರಿಕೆಟ್ನ ಉತ್ಪನ್ನವಾಗಿದ್ದೇನೆ. ನಾನು ಎಂದಿಗೂ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಮಾತ್ರ ಪ್ರತಿನಿಧಿಸುತ್ತೇನೆ. ಏಕೆಂದರೆ ನನ್ನ ಮೇಲೆ ಅವರು ಸಮಯ ಮತ್ತು ಹಣವನ್ನು ವ್ಯಯಿಸಿರುವುದರಿಂದ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಜಿಂಬಾಬ್ವೆ ನನ್ನದು ಮತ್ತು ನಾನು ಸಂಪೂರ್ಣವಾಗಿ ಅವರದ್ದು ಎಂದು ಸಿಕಂದರ್ ರಾಜಾ ಪ್ರತಿಕ್ರಿಯಿಸಿದ್ದಾರೆ.
ಸಿಕಂದರ್ ರಾಜಾ ಅವರ ಪ್ರತಿಕ್ರಿಯೆ ಎಲ್ಲರ ಮನ ಗೆಲ್ಲುತ್ತಿದ್ದು, ನಿಮ್ಮ ಶ್ರದ್ಧೆ ಹಾಗೂ ಬದ್ದತೆ ಬಗ್ಗೆ ಇನ್ನೊಂದು ಮಾತಿಲ್ಲ. ನೀವು ಪ್ರತಿಕ್ರಿಯಿಸಿದ ರೀತಿಯೇ ಎಲ್ಲವನ್ನೂ ಹೇಳುತ್ತದೆ. ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುವ ಪಾಕಿಸ್ತಾನ ಕ್ರಿಕೆಟ್ ತಂಡವು ಈಗ ತನ್ನ ಆಟಗಾರರಲ್ಲಿನ ಕೊರತೆಯನ್ನು ಜಗದ ಮುಂದೆ ಹೇಳುವ ಮೂಲಕ ಟೀಕೆಗೆ ಗುರಿಯಾಗಿದೆ. ಸಿಕಂದರ್ ರಾಜಾ ಕೊಟ್ಟ ಉತ್ತರ ಪಾಕಿಸ್ತಾನದವರುಇ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಭಾರತೀಯರು ಕಮೆಂಟ್ ಮಾಡಿದ್ದಾರೆ.