ಲಖನೌ: ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇನಲ್ಲಿ ಲಾರಿ ಹಾಗೂ ಹಾಲಿನ ಟ್ಯಾಂಕರತ್ ನಡುವೆ ಸಂಭವಿಸಿದ ಭಿಕರ ರಸ್ತೆ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, ಜನರು ಆತನ ಬಗ್ಗೆ ಗಮನಿಸದೆ ಹಾಲನ್ನು ಹಾಲಿಗಾಗಿ ಮುಗಿಬಿದ್ದಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಮೃತ ಚಾಲಕನನ್ನು ಪ್ರೇಮ್ ಸಾಗರ್ (45) ಹಾಲಿನ ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪಾತ್ರೆ ಮತ್ತು ಬಾಟಲಿಯೊಂದಿಗೆ ಧಾವಿಸಿದ ಜನ ಹಾಲನ್ನು ಪಡೆಯಲು ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಇದನ್ನೂ ಓದಿ: ನಿಜವಾಯಿತು ಶೇಖ್ ಹಸೀನಾರ ಬಗ್ಗೆ ಭಾರತದ ಜ್ಯೋತಿಷಿ ಆಡಿದ ಮಾತು; ಮುಂದಿನ ದಿನಗಳ ಬಗ್ಗೆ ಆತನ ಭವಿಷ್ಯವಾಣಿ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇನಲ್ಲಿರುವ ಎಬಿಇಎಸ್ ಕಾಲೇಜು ಬಳಿ ಈ ಅಪಘಾತ ಸಂಭವಿಸಿದ್ದು, ಮೀರತ್ ಕಡೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಪ್ರೇಮ್ ಸಾಗರ್ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಸಂಬಂಧ ಚಾಲಕನ ಕುಟುಂಬಸ್ಥರು ಅಧಿಕೃತವಾಗಿ ದೂರು ನೀಡಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ನಂತರ ಟ್ಯಾಂಕರ್ನಿಂದ ಹಾಲು ಸೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಚಾಲಕ ಸತ್ತು ಬಿದ್ದಿದ್ದರೂ ಅದನ್ನು ನೋಡದೆ ಹಾಲನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಪೊಲೀಸರು ಮೊದಲು ಜನರ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.