ಸಿನಿಮಾ

ಕೈ ಅಭ್ಯರ್ಥಿ ದಾಸರಹಳ್ಳಿ ಧನಂಜಯ್​ ಪರ ಒಲವು

ಪೀಣ್ಯದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್‌ಗೆ ಅಧಿಕಾರ ಕೊಟ್ಟು ಜನ ಭ್ರಮನಿರಾಸೆಗೊಳಗಾಗಿದ್ದಾರೆ. ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಅನ್ನುವುದನ್ನು ಮನಗಂಡಿರುವ ಜನ ಈ ಬಾರಿ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಪಕ್ಷದ ಅಭ್ಯರ್ಥಿ ದಾಸರಹಳ್ಳಿ ಧನಂಜಯ್ ಗೌಡ ಅವರನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಕಾಯುತ್ತಿದ್ದಾರೆ ಎಂದು ಹೆಗ್ಗನಹಳ್ಳಿ ವಾರ್ಡ್ ಕಾಂಗ್ರೆಸ್ ಮುಖಂಡ ಎನ್.ರಮೇಶ್ ಗೌಡ ಹೇಳಿದರು. ಅಭ್ಯರ್ಥಿ ದಾಸರಹಳ್ಳಿ ಧನಂಜಯಗೌಡ ಜತೆ ಆಂಜನೇಯ ದೇವಸ್ಥಾನ, ಹೆಗ್ಗನಹಳ್ಳಿ ಕ್ರಾಸ್, ಸಂಜೀವಿನಿನಗರ ಮುಂತಾದ ಕಡೆ ಮತದಾರರ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವೊಲಿಸಿದರು. ಕಾಂಗ್ರೆಸ್‌ ಹಲವಾರು ಯೋಜನೆ ಘೋಷಿಸಿದ್ದು, ಇನ್ನೂ ಹಲವಾರು ಯೋಜನೆ ಪ್ರಕಟಿಸಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ನಾಗರಾಜ್ ಮಾಸ್ಟರ್, ಗಂಗಚಲುವಯ್ಯ, ಜನಪ್ರಿಯ ಕುಮಾರ್, ಉಮೇಶ್‌, ತಾಸೀನಾ ಭಾನು, ಗೋವಿಂದೇಗೌಡ, ಚಂದ್ರಣ್ಣ ಇತರರಿದ್ದರು.

Latest Posts

ಲೈಫ್‌ಸ್ಟೈಲ್