ಸಿನಿಮಾ

ಪಾಕಿಸ್ತಾನದ ಧ್ವಜ ಮುದ್ರಿಸಿ ಅಶಾಂತಿಗೆ ಸಂಚು ರೂಪಿಸಲಾಗುತ್ತಿದೆ ಎಂದು ಸ್ವತಂತ್ರ ಅಭ್ಯರ್ಥಿ ವಿರುದ್ಧ ದೂರು

ಬೆಂಗಳೂರು: ಆರ್​.ಆರ್ ನಗರದ ಸ್ವತಂತ್ರ ಅಭ್ಯರ್ಥಿ ಯಾರಬ್ ವಿರುದ್ಧ ದೂರು ಸಲ್ಲಿಕೆಯಾಗಿದ್ದು ಅದೇ ನಗರದ ಅಭ್ಯರ್ಥಿ ಕುಸುಮಾ ಎಚ್ ಯಶವಂತಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ಷೇತ್ರದಲ್ಲಿ ಗೊಂದಲ ಸೃಷ್ಟಿ ಮಾಡಲು ಆರ್.ಆರ್ ನಗರದ ಅಭ್ಯರ್ಥಿ ಮುನಿರತ್ನ ಹಾಗೂ ಯಾರಬ್ ಸಂಚು ರೂಪಿಸಿದ್ದಾರೆ ಎಂದು ದೂರು ನೀಡಲಾಗಿದೆ. ಯಾರಬ್, ಸಚಿವ ಮುನಿರತ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಪಾಕಿಸ್ತಾನ ಧ್ವಜ ಮುದ್ರಿಸಿ ದಂಗೆಗೆ ಪ್ರೇರಣೆ ನೀಡಲು ಸಂಚು ನಡೆಯುತ್ತಿದೆ ಎಂದು ಮುನಿರತ್ನ ಹಾಗೂ ಯಾರಬ್​ ವಿರುದ್ಧ ಆರೋಪಿಸಲಾಗಿದೆ. ಯಾರಬ್ ತನ್ನ ಕರಪತ್ರದಲ್ಲಿ ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಮುದ್ರಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್​ ಚಿಹ್ನೆಯನ್ನು ಯಾರಬ್ ಬಳಸುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕು’ ಎಂದು ದೂರು ಎಚ್​ ಕುಸುಮಾ ದೂರು ಸಲ್ಲಿಸಿದ್ದಾರೆ.

Latest Posts

ಲೈಫ್‌ಸ್ಟೈಲ್