More

    ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಏನಿರಬಹುದು ಆಶ್ವಾಸನೆಗಳು?

    ಬೆಂಗಳೂರು: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಡೆಯಲಿದ್ದು ಬಿಜೆಪಿ ಇನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್​ ರೀತಿಯಲ್ಲಿ ಯಾವುದೇ ಆಶ್ವಾಸನೆಗಳನ್ನು ನೀಡದೇ ಇದ್ದುದರಿಂದ ಭಾರಿ ಕುತೂಹಲ ಉಂಟಾಗಿದೆ. ಇದರಿಂದಾಗಿ ಕೈ ಹಾಗೂ ತೆನೆಗಿಂತ ಬಿಜೆಪಿಯ ಪ್ರಣಾಳಿಕೆ ಭಿನ್ನವಾಗಿರಲಿದೆಯಾ ಎಂಬ ಅನುಮಾನವೂ ಎದ್ದಿದೆ.

    ನಡ್ಡಾರಿಂದ ಬಿಡುಗಡೆ

    ಬೆಳಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ಜೆಪಿ ನಡ್ಡಾರಿಂದ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಈಗಾಗಲೇ 5 ಗ್ಯಾರಂಟಿಗಳ ಮೂಲಕ ಬಹುತೇಕ ಪ್ರಣಾಳಿಕೆಯ ಅಂಶವನ್ನು ಕಾಂಗ್ರೆಸ್ ಬಹಿರಂಗಗೊಳಿಸಿದ್ದು ಪಂಚ ರತ್ನ ಯೋಜನೆಗಳ ಪ್ರಣಾಳಿಕೆಯನ್ನು ಈಗಾಗಲೇ ಜೆಡಿಎಸ್ ಬಿಡುಗಡೆ ಮಾಡಿದೆ. ಇದೀಗ ಇಂದು ಬಿಜೆಪಿಯೂ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು ಒಳಗೇನಿದೆ ಎನ್ನುವ ಕುತೂಹಲ ಶುರುವಾಗಿದೆ.

    ಸಚಿವ ಸುಧಾಕರ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ರಚನೆ

    ಬಿಜೆಪಿಯ ಪ್ರಣಾಳಿಕೆ ಸಮಿತಿ ಆರೋಗ್ಯ ಸಚಿವ ಡಾ.ಸುಧಾಕರ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದು ವಿವಿಧ ವಲಯಗಳ ನಿರೀಕ್ಷೆಗಳು ಅಗತ್ಯತೆಗಳಿಗೆ ತಕ್ಕಂತೆ ಪ್ರಣಾಳಿಕೆಯನ್ನು ರಚಿಸಲಾಗಿದೆ ಎನ್ನಲಾಗಿದೆ.

    ಎಲ್ಲ ಕಡೆಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲಾ ವಲಯಗಳಿಂದ ಸಲಹೆಗಳನ್ನೂ ಸ್ವೀಕರಿಸಿ ವಿಭಾಗ, ಜಿಲ್ಲೆ, ತಾಲ್ಲೂಕುವಾರು ಪಟ್ಟಿ ಮಾಡಿ ಪ್ರಣಾಳಿಕೆ ರಚನೆ ಮಾಡಲಾಗಿದೆ ಎನ್ನಲಾಗುತ್ತಿದೆ.

    ಈ ಬಾರಿ ಬಿಜೆಪಿ ಸರ್ಕಾರ ಬಂದರೆ ಏನು ಮಾಡಬಹುದು ಎಂದು ಪ್ರಣಾಳಿಕೆಯಲ್ಲಿ ಜೆಪಿ ನಡ್ಡಾ ಘೋಷಿಸಲಿದ್ದು ಗ್ರೇಟರ್ ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಸೇರಿದಂತೆ ವಲಯವಾರು ಪ್ರಣಾಳಿಕೆಯನ್ನು ಬಿಜೆಪಿ ಸಿದ್ಧಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts