ಸಿನಿಮಾ

ನಕಲಿ ಆಡಿಯೋ ವೈರಲ್; ಕೆಜಿಎಫ್​ ಹಾಲಿ ಶಾಸಕಿಯ ಪತಿಯಿಂದ ದೂರು ದಾಖಲು

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಕೆಜಿಎಫ್ ಕ್ಷೇತ್ರದ ಹಾಲಿ‌ ಶಾಸಕಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಶಾಸಕಿಯ ಪತಿ ಮಾತನಾಡಿದ್ದಾರೆ ಎನ್ನಲಾಗಿದ್ದು ಅದರಲ್ಲಿ ಸಂಸಾರ ಉಳಿಸಿಕೊಳ್ಳಲು ಅಂಗಲಾಚುವ ವಿಚಾರ ಉಲ್ಲೇಖವಾಗಿದೆ. ಆದರೆ ಮೇಲ್ನೋಟಕ್ಕೆ ಇದು ಫೇಕ್​ ಆಡಿಯೋ ಎಂದೇ ತೋರುತ್ತಿದೆ.

ಇದನ್ನೂ ಓದಿ: ಕೆಜಿಎಫ್​ನಲ್ಲಿ ರೂಪಕಲಾ ಹಾದಿ ಸುಗಮ? ಬಿಜೆಪಿಯಲ್ಲಿ ಅರ್ಧ ಡಜನ್​ ಆಕಾಂಕ್ಷಿಗಳು : ಅನುಮಾನದಿಂದ ಹೆಜ್ಜೆ ಇಡುತ್ತಿರುವ ಜೆಡಿಎಸ್​ ಅಭ್ಯರ್ಥಿ

ಈ ಆಡಿಯೋದಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಜತೆ ರೂಪಕಲಾಗೆ ಸಂಬಂಧ ಕಲ್ಪಿಸಲಾಗಿದ್ದು ಈ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ: ಪ್ರಧಾನಿ ಹುದ್ದೆ ಕೊಟ್ಟರೂ ಬೇಡ! ಚಿಕ್ಕಪೇಟೆ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ; ಕೆಜಿಎಫ್ ಬಾಬು

ವೈರಲ್ ಆಡಿಯೋ ಒಳಗೆ ಏನಿದೆ?

ಈ ಆಡಿಯೋ ದಲ್ಲಿ ” 2018ರಲ್ಲಿ ನನ್ನ ಮನೆ ಬಾಗಿಲಿಗೆ ಬಂದು ನನ್ನ ಕನ್ನಿನ್ಸ್ ಮಾಡಿ ಅವಳನ್ನು ಕರೆದುಕೊಂಡು ಹೋದಿರಿ. ಅ*ನಮ್ಮ**** ಬಾಲಹಳ್ಳಿ, ಗೋವಿಂದೇಗೌಡನ ಜೊತೆ ಸೇರಿಕೊಂಡು ಮಕ್ಕಳನ್ನು ಮಡಿಕೇರಿಗೆ ಹಾಕಿದ್ದಾಳೆ. ಗೋವಿಂದೇಗೌಡರ ವಿಚಾರ ಎತ್ತಿದರೆ ಸಾಕು ಊಟಕೆ ವಿಷ ಹಾಕಿ ಸಾಯಿಸಿಬಿಡ್ತೀನಿ ಅಂತಾರೆ. ನಿಮ್ಮನ್ನ ಕೈ ಮುಗಿತೀನಿ ರೆಡ್ಡಿಯವರೇ ಅವಳನ್ನು ಸೋಲಿಸಿ ಮನೆಗೆ ಕಳುಹಿಸಿಬಿಡಿ. ನಾನು ಹೆಂಗೋ ನನ್ನ ಸಂಸಾರ ಉಳಿಸಿಕೊಳ್ಳಿನಿ” ಎಂಬ ಸಂಭಾಷಣೆ ಕೇಳಿಬಂದಿದೆ.

ಈ ಬಗ್ಗೆ ಪತಿ ಶಶಿಧರ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದು ಐಪಿಸಿ 120B, 171G,465, ಹಾಗೂ 469 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Latest Posts

ಲೈಫ್‌ಸ್ಟೈಲ್