More

    ಪ್ರಧಾನಿ ಹುದ್ದೆ ಕೊಟ್ಟರೂ ಬೇಡ! ಚಿಕ್ಕಪೇಟೆ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ; ಕೆಜಿಎಫ್ ಬಾಬು

    ಬೆಂಗಳೂರು: ಕಳೆದ 9 ತಿಂಗಳಿನಿಂದ ನನಗೆ ತೊಂದರೆ ಕೊಡುತ್ತಿದ್ದಾರೆ. ED, IT ದಾಳಿ ಮಾಡಿಸಿದ್ದಾರೆ. ಅಲ್ಲದೆ ನನ್ನ ಮೇಲೆ ಕ್ಷೇತ್ರದಲ್ಲಿ 6 ಎಫ್​ಐಆರ್ ಹಾಕಿಸಿದ್ದಾರೆ. ಚುನಾವಣೆಗ ಹಿನ್ನೆಲೆ ಮಾನಸಿಕವಾಗಿ ನನಗೆ ಕಿರುಕುಳ ಕೊಡುತ್ತಿದ್ದು, ನನ್ನ 26 ಬ್ಯಾಂಕ್​ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

    ಇದನ್ನೂ ಓದಿ: ರಮ್ಯಾ ಅವರನ್ನು ಪಕ್ಷಕ್ಕೆ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ; ಕಾಂಗ್ರೆಸ್​ ನಾಯಕಿಗೆ ಟಾಂಗ್ ಕೊಟ್ಟ ಆರ್​​.ಅಶೋಕ್

    ಭರವಸೆ ಈಡೇರಿಸುತ್ತೇನೆ

    ಕೆಜಿಎಫ್ ಬಾಬು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಐಟಿ ದಾಳಿ ವೇಳೆ ನನ್ನ ಮನೆಯಲ್ಲಿ ಏನೂ ಸಿಗದಿದ್ರು, ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ನಿಷ್ಕ್ರೀಯಗೊಂಡಿರುವ ಬ್ಯಾಂಕ್ ಖಾತೆಗಳನ್ನು ಮತ್ತೆ ತೆರೆಯುತ್ತಾರೆ. ಚಿಕ್ಕಪೇಟೆ ಕ್ಷೇತ್ರದ ಜನರಿಗೆ ಸಹಾಯ ಮಾಡಬಾರದೆಂದು ಈ ರೀತಿ ಮಾಡಿದ್ದಾರೆ. ಆದರೆ ಚುನಾವಣೆ ಮುಗಿದ ನಂತರ ನಾನು ಕೊಟ್ಟಿರುವ ಭರವಸೆ ಈಡೇರಿಸುತ್ತೇನೆ. ಎಪಿಎಲ್ ಕಾರ್ಡ್ ಇರುವವರಿಗೂ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

    ತೊಂದರೆ ಕೊಡುವುದರಿಂದ ಯಾರಿಗೆ ಲಾಭ?

    ನನಗೆ ತೊಂದರೆ ಕೊಡುವುದರಿಂದ ಯಾರಿಗೆ ಲಾಭ ಆಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಬಡ ಮಕಾನ್‌ನಲ್ಲಿ ಆರ್.ವಿ ದೇವರಾಜ ಬಂದು ರಂಜಾನ್ ಶುಭಾಶಯ ಕೋರಿದರು. ಆಮೇಲೆ ಒಂದಾಗಿದ್ದೇವೆ ಎಂದು ಸುಳ್ಳು, ಅಪಪ್ರಚಾರ ಮಾಡಿದ್ದಾರೆ. ಆ ರೀತಿ ಏನು ಆಗಿಲ್ಲ ಎಂದು ಕೆಜಿಎಫ್ ಬಾಬು ಸ್ಪಷ್ಟ ಪಡಿಸಿದರು.

    ಇದನ್ನೂ ಓದಿ: ‘ಜಯವಾಹಿನಿ’ ಏರಿ ರೋಡ್​ ಶೋ ಆರಂಭಿಸಿದ ಸಿಎಂ ಬೊಮ್ಮಾಯಿ; ಇಂದಿನಿಂದ ಬಿಜೆಪಿ ರಥಯಾತ್ರೆ

    ಪ್ರಧಾನಿ ಹುದ್ದೆ ಕೊಟ್ಟರೂ ಬೇಡ

    ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಗಂಗಾಬಿಕೆ ಕಾರಣ. ಇದೀಗ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಹೊಸ ಮುಖ ಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ನಮಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಪಕ್ಷೇತರವಾಗಿ ಸ್ಪರ್ಧೆ ಮಾಡಿದಾಗ ಕಾಂಗ್ರೆಸ್ ನಾಯಕರು ರಾಜ್ಯಸಭಾ ಸದಸ್ಯ ಮಾಡುತ್ತೇವೆ ಬನ್ನಿ ಎಂದಿದ್ದರು. ಆದರೆ ಕ್ಷೇತ್ರದ ಜನರಿಗೆ ಮೋಸ ಮಾಡಲು ನನಗೆ ಇಷ್ಟವಿಲ್ಲ. ಪ್ರಧಾನಿ ಹುದ್ದೆ ಕೊಟ್ಟರು ಬೇಡ. ಚಿಕ್ಕಪೇಟೆ ಬಿಟ್ಟು ನಾನು ಎಲ್ಲೂ ಹೋಗಲ್ಲ. ಇನ್ನು ಏನೇನೋ ತೊಂದರೆ ಕೊಡುತ್ತಾರೆ ಕೊಡಲಿ ಎಂದರು.

    ಇದನ್ನೂ ಓದಿ: “ಅಮೃತ್​ಪಾಲ್​ ಸಿಂಗ್​ ಸರೆಂಡರ್​ ಆಗಿಲ್ಲ…” ಸ್ಪಷ್ಟನೆ ನೀಡಿದ ಪಂಜಾಬ್​ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts