More

    ‘ಜಯವಾಹಿನಿ’ ಏರಿ ರೋಡ್​ ಶೋ ಆರಂಭಿಸಿದ ಸಿಎಂ ಬೊಮ್ಮಾಯಿ; ಇಂದಿನಿಂದ ಬಿಜೆಪಿ ರಥಯಾತ್ರೆ

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಉಳಿದಿವೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ. ‘ಜನವಾಹಿನಿ’ ಹೆಸರಿನಲ್ಲಿ ಯಲಹಂಕದಿಂದ ರೋಡ್​​ ಶೋ ಆರಂಭಿಸಿದ್ದಾರೆ. ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೊಮ್ಮಾಯಿ ರೋಡ್​ ಶೋ ಕೈಗೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿ ಸೇರಿದ ಗ್ರಾಪಂ ಸದಸ್ಯರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಎಂ.ಕೃಷ್ಣಪ್ಪಗೆ ಬೆಂಬಲ

    ವಿಧಾನಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಸಿಎಂ ಬೊಮ್ಮಾಯಿ ನೇತೃತ್ವದ ತಂಡವು ‘ಜಯವಾಹಿನಿ’ ರಥದಲ್ಲಿ ಬಸವ ಜಯಂತಿ ದಿನವೇ ಚುನಾವಣಾ ಯಾತ್ರೆ ಪ್ರಾರಂಭಿಸಿದೆ. ಸಿಎಂ ಬೊಮ್ಮಾಯಿ ಇಂದು ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

    ಇದನ್ನೂ ಒದಿ: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ಧುಮುಕಿದ ಪತ್ನಿ ಚನ್ನಮ್ಮ, ಪುತ್ರ ಭರತ್​

    ಪ್ರಚಾರ ಪಥ

    • ಏ.23: ರೋಡ್ ಶೋ, ಸಭೆ, ಬೆಳಗ್ಗೆ 9.45ಕ್ಕೆ ಬೆಂಗಳೂರಿನ ಶ್ರೀ ಬಸವೇಶ್ವರ ವೃತ್ತದಿಂದ ಪ್ರಾರಂಭ. ಬೆಳಗ್ಗೆ 10.15- ಯಲಹಂಕ, 10.30- ದೊಡ್ಡಬಳ್ಳಾಪುರ, ಮಧ್ಯಾಹ್ನ 12.30- ನೆಲಮಂಗಲ, 1.30-es, 2.15- ತುಮಕೂರು ಗ್ರಾಮಾಂತರ (ಗೂಳೂರು), 3- ತುಮಕೂರು ನಗರ, ಸಂಜೆ 4- ಗುಬ್ಬಿ 5- ಕೆ.ಬಿ. ಕ್ರಾಸ್, 6- ತಿಪಟೂರು, ರಾತ್ರಿ 7- ಅರಸೀಕರೆ, 7.45- ಬಾಣಾವರ, 8.15- ಕಡೂರು, 10 ಗಂಟೆಗೆ ದಾವಣಗೆರೆ ಹಾಗೂ ವಾಸ್ತವ್ಯ.
    • ಏ.24: ದಾವಣಗೆರೆ, ಹರಿಹರ, ರಾಣಿ ಬೆನ್ನೂರು, ಹಾವೇರಿ, ಬಂಕಾಪುರ, ಸವಣೂರು, ಶಿಗ್ಗಾಂವಿ, ಕುಂದಗೋಳ, ನಂತರ ಹುಬ್ಬಳ್ಳಿಯಲ್ಲಿ ವಾಸ್ತವ್ಯ.
    • ಏ.25: ಹುಬ್ಬಳ್ಳಿ, ಕಿತ್ತೂರು, ಖಾನಾಪುರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ/ ಉತ್ತರ, ಬೈಲಹೊಂಗಲ, ಸವದತ್ತಿ, ಹುಬ್ಬಳ್ಳಿಯಲ್ಲಿ ವಾಸ್ತವ್ಯ
    • ಏ.26: ಯಮಕನಮರಡಿ, ಚಿಕ್ಕೋಡಿ, ನಿಪ್ಪಾಣಿ, ಅರಬಾವಿ, ಗೋಕಾಕ, ಅಥಣಿ, ರಾಯಭಾಗ, ರಾಮದುರ್ಗ.
    • ಏ.27: ಶಿಗ್ಗಾಂವಿಯಲ್ಲಿ ಪ್ರಚಾರ,
    • ಏ.28: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.

    ಇದನ್ನೂ ಓದಿ: ರಮ್ಯಾ ಅವರನ್ನು ಪಕ್ಷಕ್ಕೆ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ; ಕಾಂಗ್ರೆಸ್​ ನಾಯಕಿಗೆ ಟಾಂಗ್ ಕೊಟ್ಟ ಆರ್​​.ಅಶೋಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts