More

    ಬಜರಂಗದಳ ಬ್ಯಾನ್ ಮಾಡ್ತಾರಾ? ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತಾರಾ? ಪರಂ ಹೇಳೋದೇನು?

    ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಗೋಹತ್ಯೆ ನಿಷೇಧ ಕಾಯ್ದೆ, ಬಜರಂಗದಳದ ಬ್ಯಾನ್, ರೋಹಿತ್ ಚಕ್ರತೀರ್ಥ ರಚಿಸಿದ್ದ ಪಠ್ಯಕ್ರಮ, ಉಚಿತ ವಿದ್ಯುತ್ ಮುಂತಾದ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

    ಆರ್ ಎಸ್ ಬಜರಂಗದಳ ಬ್ಯಾನ್ ವಿಚಾರವಾಗಿ ಮಾತನಾಡಿದ ಪರಮೇಶ್ವರ್, “ಇದರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಒಂದು ವೇಳೆ ಅವರು ಶಾಂತಿ ಕದಡುವ ಕೆಲಸ ಮಾಡಿದರೆ ಅವರ ಮೇಲೆ ಕ್ರಮ ತಗೋತೀವಿ. ಅದಲ್ಲದೇ ಅವಶ್ಯಕತೆ ಬಿದ್ದರೆ ಬ್ಯಾನ್ ಮಾಡುತ್ತೇವೆ ಅಂತ ಹೇಳಿದ್ದೆವು. ಅದು ಬಿಟ್ಟರೆ ಬೇರೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ವೈಯಕ್ತಿಕವಾಗಿ ಅವರ ಅಭಿಪ್ರಾಯ ಹೇಳಿರಬಹುದು. ಆದರೆ ಇದಕ್ಕೆಲ್ಲ ಚರ್ಚೆ ಅಗತ್ಯವಿದೆ” ಎಂದು ಹೇಳಿದ್ದಾರೆ.

    ಇನ್ನು ಗೋ ಹತ್ಯೆ ಸೇರಿದಂತೆ ಹಲವು ಬಿಜೆಪಿ ಅವಧಿಯ ಕಾಯ್ದೆಗಳನ್ನು ನಿಷೇಧ ಮಾಡುವ ವಿಚಾರದ ಕುರಿತಾಗಿ ಅವರು “ಯಾವುದು ಸಮಾಜದ ವಿರುದ್ಧ ಇದೆಯೋ, ಸಮಾಜದ ಶಾಂತಿ ಕದಡುವ ವಿಚಾರಗಳು, ಜನರ ವಿರೋಧಿ ಕಾಯ್ದೆಗಳು ಇವೆಯೋ ಅಂತಹ ನಿಯಮಗಳನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡಲು ಬೇಕಾದ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ. ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾದ ಪಠ್ಯ ಪುಸ್ತಕ ರದ್ದು ವಿಚಾರವಾಗಿ ಪರಮೇಶ್ವರ್, “ಸರ್ಕಾರ ಸಂಪೂರ್ಣವಾಗಿ ತೀರ್ಮಾನ ತೆಗೆದುಕೊಳ್ಳುವಂತಹ ಹಂತಕ್ಕೆ ಬರಬೇಕು. ವಿಧಾನಸೌಧದಲ್ಲಿ ಸಂಪೂರ್ಣವಾದ ಸರ್ಕಾರ ಕೂತ ಮೇಲೆ, ಖಾತೆ ಹಂಚಿಕೆ ಆದಮೇಲೆ, ಸಂಬಂಧಪಟ್ಟ ಸಚಿವರು ಅಭ್ಯಾಸ ಮಾಡುತ್ತಾರೆ. ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ. ಒಬ್ಬೊಬ್ಬರೆ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗೋದಿಲ್ಲ” ಎಂದಿದ್ದಾರೆ.

    ಕರೆಂಟ್ ಬಿಲ್ ಕಟ್ಟಬೇಡಿ ಎಂದು ಎಚ್ಡಿಕೆ ಕರೆ ನೀಡ್ತೇನೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, “ನಾನು ಬಿಜೆಪಿ, ಜೆಡಿಎಸ್ ಅವರ ರಿಯಾಕ್ಷನ್ ನೋಡಿದ್ದೇನೆ. ನಾವು ಹೇಳಿದ್ದು ಮೊದಲ ಸಂಪುಟದಲ್ಲಿ ತೀರ್ಮಾನ ತಗೋತಿವಿ ಅಂತ. ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ. ಅದೇ ಪ್ರಕಾರ ಪ್ರಮಾಣವಚನದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೆ ಸರ್ಕಾರಿ ಆದೇಶಕ್ಕೆ ಸೂಚನೆ ಕೊಟ್ಟಿದ್ದೇವೆ. ಸಂಜೆಯೊಳಗೆ ಆದೇಶ ಆಗಿದೆ. ಅದರ ಪ್ರೊಸೀಜರ್ ವರ್ಕೌಟ್ ಮಾಡಲಾಗುತ್ತಿದೆ. ಯಾವ ರೀತಿ ಡಿಸ್ಕೌಂಟ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡಿತಿದೆ. ಇವರಿಗೆ ಹೊಟ್ಟೆ ಉರಿ, ನಮ್ಮ ಪರಿಸ್ಥಿತಿ ಇಲ್ಲಿಗೆ ಬಂತಲ್ಲ ಅಂ. ಅದಕ್ಕೆ ಹೀಗೆ ಹೇಳಿಕೆ ಕೊಡುತ್ತಿದ್ದಾರೆ. ಗ್ಯಾರಂಟಿಗಳನ್ನು ರುಜು ಮಾಡಿ ಕಾರ್ಡ್ ಹಂಚಿದ್ದೇವೆ” ಎಂದಿದ್ದಾರೆ.

    ನಾಳೆ ನಾನು ಕೂಡ ದೆಹಲಿಗೆ ಹೋಗುತ್ತೇನೆ. ನಿನ್ನೆ ಸಿಎಂ ಡಿಸಿಎಂ ಹೋಗಿದ್ದಾರೆ. ಇವತ್ತು ಚರ್ಚೆ ಆಗಬಹುದು. ಸಂಜೆಯೇ ಮುಗಿಸಬಹುದು ಗೊಂದಲಕ್ಕೆ ಯಾವುದೇ ಕಾರಣ ಇಲ್ಲ. ಕಳೆದ ಬಾರಿ ಸಿಎಲ್ ಪಿ ಅಲ್ಲೇ ಅನೌನ್ಸ್ ಮಾಡಿದ್ದರು. ಈ ಬಾರಿ ದೆಹಲಿಗೆ ಹೋಗಿದೆ. ಒಂದೊಂದು ಸನ್ನಿವೇಶಕ್ಕೆ ತಕ್ಕಂತೆ ತೀರ್ಮಾನಗಳು ಆಗುತ್ತವೆ. ನಾನು ಯಾವ ಖಾತೆ ಕೊಟ್ಟರು ಕೆಲಸ ಮಾಡುತ್ತೇನೆ

    ಯಾವುದು ಕಠಿಣ ಅಲ್ಲ. ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದು ಅವರ ವಿವೇಚನೆಗೆ ಬಿಟ್ಟಿದ್ದು. ನಾನು ಖಾತೆ ಕೇಳೋದಾಗಿದ್ದರೆ ದೆಹಲಿಗೆ ಹೋಗಿ ಲಾಬಿ ಮಾಡುತ್ತಿದ್ದೆ. ನನ್ನ ಅನುಭವ ಪರಿಗಣಿಸಿ ಅವರೇ ಕೊಡ್ತಾರೆ. ಅವರಿಗೆ ಗೊತ್ತಿಲ್ವಾ? ಚೆನ್ನಾಗಿ ಗೊತ್ತಿದೆ ಅವರಿಗೆ. ಪಕ್ಷ ಅಂದ ಮೇಲೆ ಶಿಸ್ತಿನಿಂದ ಹೋಗಬೇಕು. ನಾನು ಅದನ್ನೇ ಮಾಡುತ್ತಿದ್ದೇನೆ” ಎಂದು ತಮ್ಮ ಸಚಿವ ಸ್ಥಾನದ ಕುರಿತಾಗಿ ಹೇಳಿಕೆ ನೀಡಿದ್ದಾರೆ.

    ಸಿದ್ದರಾಮಯ್ಯಗೆ ಈ ಬಾರಿ ಫ್ರೀ ಹ್ಯಾಂಡ್ ಇಲ್ಲ ಎಂಬ ವಿಚಾರಕ್ಕೆ ಪರಂ, ಅವರನ್ನೇ ಕೇಳಿ ಎಂದು ನಗುತ್ತಲೇ ಹೊರಟು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts