More

    ಹೈಕೋರ್ಟ್​ ನಿವೃತ್ತ ಜಡ್ಜ್​ ನೇತೃತ್ವದಲ್ಲಿ ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆ: ಅಮಿತ್​ ಷಾ ಹೇಳಿಕೆ

    ಇಂಫಾಲ್​: ಮಣಿಪುರದ ಜನಾಂಗೀಯ ಹಿಂಸಾಚಾರ ಪ್ರಕರಣದ ತನಿಖೆಯು ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಇಂದು (ಜೂ. 1) ಹೇಳಿದರು.

    ಅಮಿತ್​ ಷಾ ಅವರು ನಾಲ್ಕು ದಿನಗಳ ಮಣಿಪುರ ಪ್ರವಾಸದಲ್ಲಿದ್ದು, ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

    ಇದನ್ನೂ ಓದಿ: ಜುಲೈ ತಿಂಗಳೊಳಗೆ ಆರಂಭವಾಗಲಿದೆ ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು

    ಹಿಂಸಾಚಾರಕ್ಕೆ ಸಂಬಂಧಿಸಿದ 6 ಪ್ರಕರಣಗಳನ್ನು ಕೇಂದ್ರಿಯಾ ತನಿಖಾ ಸಂಸ್ಥೆ (ಸಿಬಿಐ)ಗೆ ಅಮಿತ್​ ಷಾ ವಹಿಸಿದ್ದಾರೆ. ಕೇಂದ್ರದ ಮಾರ್ಗದರ್ಶನದಲ್ಲಿ ಸಿಬಿಐ ತನಿಖೆ ನಡೆಸಲಿದೆ. ಈ ತನಿಖೆಯು ತಟಸ್ಥವಾಗಿರುತ್ತದೆ ಮತ್ತು ಹಿಂಸಾಚಾರದ ಹಿಂದಿರುವ ಕಾರಣಗಳ ಮೂಲವನ್ನು ಹುಡುಕುತ್ತದೆ ಎಂದು ನಾನು ಎಲ್ಲರಿಗೂ ಭರವಸೆ ನೀಡುತ್ತೇನೆಂದು ಅಮಿತ್​ ಷಾ ತಿಳಿಸಿದರು.

    ಭದ್ರತಾ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿರುವವರಿಗೆ ಖಡಕ್​ ಎಚ್ಚರಿಕೆ ನೀಡಿದ ಷಾ, ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

    ಸಂತಾಪ ಸೂಚಿಸುತ್ತೇನೆ

    ಕಳೆದ ಒಂದು ತಿಂಗಳು ಮಣಿಪುರದಲ್ಲಿ ಹಲವು ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಈ ಹಿಂಸಾಚಾರದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಕಳೆದ ಮೂರು ದಿನಗಳಿಂದ ಇಂಫಾಲ್​, ಮೊರೆಹ್​ ಮತ್ತು ಚುರಚಂದಪುರ್​ ಸೇರಿದಂತೆ ಮಣಿಪುರದ ಅನೇಕ ಪ್ರದೇಶಗಳಿಗೆ ಸಂಚಾರ ಮಾಡಿದ್ದೇನೆ. ರಾಜ್ಯದಲ್ಲಿ ಶಾಂತಿ ನೆಲೆಸಲು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದೇನೆ ಎಂದರು.

    ಮೃತರ ಕುಟುಂಬಗಳಿಗೆ ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಷಾ ಭರವಸೆ ನೀಡಿದರು.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ 13ರ ಬಾಲಕಿ! ನಂತರ ನಡೆದದ್ದು ಇನ್ನೂ ಭೀಕರ…

    ಹಿಂಸಾಚಾರಕ್ಕೆ ಕಾರಣವೇನು?

    ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 40 ದಂಗೆಕೋರರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಈಚೆಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ಆದರೆ, ಕುಕಿ ನ್ಯಾಷನಲ್ ಆರ್ಗನೈಸೇಶನ್ (ಕೆಎನ್​ಒ) ಈ ಸಂಗತಿಯನ್ನು ನಿರಾಕರಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಮೈತೆಯಿ ಸಮುದಾಯದ ಜನರು ಈಚೆಗೆ ಹೋರಾಟ ಆರಂಭಿಸಿದ ನಂತರ ಮಣಿಪುರದಲ್ಲಿ ಹಿಂಸಾಚಾರಗಳು ಭುಗಿಲೆದ್ದಿವೆ. ರಾಜ್ಯದ ಜನಸಂಖ್ಯೆಯಲ್ಲಿ ಮೈತೆಯಿ ಸಮುದಾಯವರ ಪಾಲು ಹೆಚ್ಚಾಗಿರುವುದರಿಂದ ಹಾಗೂ ರಾಜಕೀಯವಾಗಿಯೂ ಈ ಸಮುದಾಯವರು ಬಲಾಢ್ಯವಾಗಿರುವುದರಿಂದ ಉಳಿದ ಪರಿಶಿಷ್ಪ ಪಂಗಡಗಳ ಸಮುದಾಯದವರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಬಂಡುಕೋರರ ಬೀಡು; ಸಂಘರ್ಷದ ನಾಡು

    ಈ ವಾಯುಯಾನ ಸಂಸ್ಥೆ, ವಿಮಾನ ಏರುವ ಮುನ್ನ ಪ್ರಯಾಣಿಕರ ತೂಕ ಚೆಕ್ ಮಾಡುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts