More

  ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ 13ರ ಬಾಲಕಿ! ನಂತರ ನಡೆದದ್ದು ಇನ್ನೂ ಭೀಕರ…

  ಬಿಹಾರ: ತನ್ನ ಬಾಯ್​ಫ್ರೆಂಡ್​ ಸಹಾಯದೊಂದಿಗೆ 13 ವರ್ಷದ ಬಾಲಕಿ ತನ್ನ ತಂಗಿಯನ್ನು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಜಂಡಹಾಳ ಬ್ಲಾಕ್​ನಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

  ಇದನ್ನೂ ಓದಿ: ಬೆಳಗಾವಿ ಬಾಲಕಿಯ ಕಾಲಡಿ ಹೆಡೆ ಬಿಚ್ಚಿದ ಹಾವು ; ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ರೋಚಕ ದೃಶ್ಯ

  ದೇಹ ಕೊಳೆತು ದುರ್ವಾಸನೆ ಬರುತ್ತಿದ್ದಂತೆ ದೇಹವನ್ನು ಕತ್ತರಿಸಿ ಆ್ಯಸಿಡ್‌ನಿಂದ ಸುಟ್ಟು ಮನೆಯ ಹಿತ್ತಲಿನಲ್ಲಿ ಎಸೆದಿದ್ದಾರೆ. ಕೆಲವು ಗ್ರಾಮಸ್ಥರು ಅವರ ಮನೆ ಹಿತ್ತಲಿನಲ್ಲಿ ಶವದ ಅವಶೇಷಗಳನ್ನು ಗಮನಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಈ ಘಟನೆ ಬೆಳಕಿಗೆ ಬಂದಿದೆ ಎಂದು ವೈಶಾಲಿ ಎಸ್ಪಿ ರವಿ ರಂಜನ್ ಕುಮಾರ್ ಮಾಹಿತಿ ನೀಡಿದ್ದಾರೆ.

  “ನಾವು ನಂತರ ಶ್ವಾನದಳ ಮತ್ತು ಎಫ್‌ಎಸ್ಎಲ್ ತಂಡವನ್ನು ಅಪರಾಧದ ಸ್ಥಳಕ್ಕೆ ಕಳುಹಿಸಿದ್ದೇವೆ. ತಂಡವು ಅವಶೇಷಗಳನ್ನು ಸಂಗ್ರಹಿಸಿದ್ದು ತನಿಖೆಗಳು ಶರೀರದ ಅವಶೇಷಗಳು ಅಪ್ರಾಪ್ತರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅದರ ಪ್ರಕಾರ, ನಾವು ಪ್ರದೇಶದಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೆವು. ಈ ಸಂದರ್ಭ ಒಂಬತ್ತು ವರ್ಷದ ಮಗು ಕಾಣೆಯಾಗಿರುವುದು ಕಂಡುಬಂದಿದೆ. ಆ ಮಗು ಮತ್ಯಾರೂ ಅಲ್ಲ, ಪ್ರಮುಖ ಆರೋಪಿಯ ಸಹೋದರಿ ಎಂದು ಕಂಡುಬಂದಿತ್ತು. ಮೇ 16 ರಂದು ಬಾಲಕಿ ನಾಪತ್ತೆಯಾಗಿದ್ದು ಆಕೆಯ ಅವಶೇಷಗಳನ್ನು ಮೇ 19 ರಂದು ವಶಪಡಿಸಿಕೊಳ್ಳಲಾಯಿತು. ನಂತರ ನಾವು ಸಾಕ್ಷ್ಯವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಶವಪರೀಕ್ಷೆಯನ್ನು ಸಹ ನಡೆಸಿದ್ದೇವೆ. ನಮಗೆ ಸಾಕಷ್ಟು ಪುರಾವೆ ಸಿಕ್ಕಿದ ನಂತರ ನಾವು ಮಂಗಳವಾರ ಸಂಜೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಕುಮಾರ್ ಹೇಳಿದರು.

  ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ 19 ವಿದ್ಯಾರ್ಥಿಗಳನ್ನು ಹತ್ಯೆಗೈದ ಆರೋಪ..!

  “ನಾವು ಮೃತಳ ಅಕ್ಕನನ್ನು ಕಠಿಣವಾಗಿ ವಿಚಾರಿಸಿದಾಗ, ಕೊನೆಗೆ ಘಟನೆಗಳ ಸಂಪೂರ್ಣ ಸರಣಿಯನ್ನು ಬಹಿರಂಗಪಡಿಸಿದಳು. ಆರೋಪಿ ಹಾಗೂ ಅವಳ ಬಾಯ್​ಫ್ರೆಂಡ್​ ಕೆಲವು ದಿನಗಳ ಹಿಂದೆ ನಿಕಟವಾಗಿದ್ದ ಭಂಗಿಯಲ್ಲಿದ್ದು ಆ ಸಂದರ್ಭದಲ್ಲಿ ಆಕೆಯ ಸಹೋದರಿ ಘಟನೆಯನ್ನು ನೋಡಿದ್ದಳು. ಈ ವಿಚಾರ ಎಲ್ಲೂ ಹೊರ ಹೋಗಬಾರದು ಎಂದು ನಂತರ ಸಹೋದರಿಯನ್ನೇ ಕೊಲ್ಲಲು ನಿರ್ಧರಿಸಿದಳು. ಅದರಂತೆ ಬಾಯ್​ಫ್ರೆಂಡ್​ ಸಹಾಯದಿಂದ ಕೊಲೆ ಮಾಡಿ ನಂತರ ಯಾರಿಗೂ ತಿಳಿಯಬಾರದು ಎಂದು ಶವವನ್ನು ಕೊಚ್ಚಿ ಆ್ಯಸಿಡ್​ ಹಾಕಿ ಮನೆಯ ಹಿತ್ತಲಿನಲ್ಲೇ ಎಸೆದಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts