More

    ಕೋಟಿ ಕೋಟಿ ಕಳಕೊಂಡರೂ ಮತ್ತೊಮ್ಮೆ ಎಲಾನ್ ಮಸ್ಕ್ ಅತೀ ಶ್ರೀಮಂತ ವ್ಯಕ್ತಿ!

    ನವದೆಹಲಿ: Arnault ನ LVMH ಷೇರುಗಳು ಪ್ಯಾರಿಸ್ ವಹಿವಾಟಿನಲ್ಲಿ 2.6% ಕುಸಿದ ನಂತರ ಟೆಸ್ಲಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಐಷಾರಾಮಿ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಸಿರಿವಂತಿಕೆಯಲ್ಲಿ ಬುಧವಾರ ಮೀರಿಸಿದ್ದಾರೆ. ಈ ಮೂಲಕ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ.

    ಈ ಹಿಂದೆ ಅವರು ಟ್ವಿಟರ್​ ಸಂಸ್ಥೆಯನ್ನು ಖರೀದಿಸಿದ ನಂತರ ತಮ್ಮ ಸಂಪತ್ತನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರು.

    ಇದನ್ನೂ ಓದಿ: 45 ಸೆಕೆಂಡ್​ಗೆ ಒಂದು ಕಾರು ತಯಾರಿಸಲಿರುವ ಎಲಾನ್ ಮಸ್ಕ್!

    ಟೆಕ್ ಉದ್ಯಮವು ಹೆಣಗಾಡುತ್ತಿರುವಾಗ ಹಣದುಬ್ಬರ ಅನೇಕ ದೇಶಗಳ ಹೊಸ್ತಿಲಲ್ಲಿ ಇದ್ದರೂ ಅರ್ನಾಲ್ಟ್ ಸಂಸ್ಥೆ ಡಿಸೆಂಬರ್‌ನಲ್ಲಿ ಮಸ್ಕ್ ಅನ್ನು ಮೀರಿಸಿದ್ದರು. ಉದ್ಯಮಿ ಅರ್ನಾಲ್ಟ್, LVMH, ಲೂಯಿ ವಿಟಾನ್, ಫೆಂಡಿ ಮತ್ತು ಹೆನ್ನೆಸ್ಸಿ ಸೇರಿದಂತೆ ಅನೇಕ ಬ್ರಾಂಡ್‌ಗಳನ್ನು ಹೊಂದಿದ್ದಾರೆ.

    ಇದನ್ನೂ ಓದಿ: ಓವೈಸಿ ಅಧ್ಯಕ್ಷತೆಯ ಎಐಎಂಐಎಂ ಪಕ್ಷದ ಟ್ವಿಟ್ಟರ್ ಅಕೌಂಟ್ ಹ್ಯಾಕ್! ಎಲಾನ್ ಮಸ್ಕ್ ಖಾತೆಯಾಗಿ ಬದಲು!

    ಏಪ್ರಿಲ್‌ನಿಂದ LVMH ಷೇರುಗಳು ಸುಮಾರು 10% ಕುಸಿದಿವೆ, ಒಂದು ಹಂತದಲ್ಲಿ ಒಂದೇ ದಿನದಲ್ಲಿ ಅರ್ನಾಲ್ಟ್‌ನ ನಿವ್ವಳ ಮೌಲ್ಯದಿಂದ 11 ಶತಕೋಟಿ ಡಾಲರ್ ಕೆಳಗಿಳಿದಿದೆ.

    ಇದೆಲ್ಲದರ ನಡುವೆ ಎಲಾನ್ ಮಸ್ಕ್ ಈ ವರ್ಷ 55.3 ಶತಕೋಟಿ ಡಾಲರ್​ಗಿಂತ ಹೆಚ್ಚು ಗಳಿಸಿದ್ದಾರೆ. ಈ ಆದಾಯವನ್ನು ಹೆಚ್ಚಾಗಿ ಟೆಸ್ಲಾ ಕಾರಣದಿಂದಾಗಿ ಪಡೆಯಲಾಗಿದೆ ಎನ್ನಲಾಗಿದೆ. ಇದು ಅವರ ಸಂಪತ್ತಿನ 71% ಆಗಿದೆ. ಸೂಚ್ಯಂಕದ ಪ್ರಕಾರ ಮಸ್ಕ್‌ನ ಸಂಪತ್ತು ಈಗ ಸುಮಾರು 192.3 ಶತಕೋಟಿ ಡಾಲರ್​ ಮೌಲ್ಯದ್ದಾಗಿದ್ದು ಅರ್ನಾಲ್ಟ್​ದು ಸುಮಾರು 186.6 ಶತಕೋಟಿ ಡಾಲರ್ ಆಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts