More

    ಓವೈಸಿ ಅಧ್ಯಕ್ಷತೆಯ ಎಐಎಂಐಎಂ ಪಕ್ಷದ ಟ್ವಿಟ್ಟರ್ ಅಕೌಂಟ್ ಹ್ಯಾಕ್! ಎಲಾನ್ ಮಸ್ಕ್ ಖಾತೆಯಾಗಿ ಬದಲು!

    ಹೈದರಾಬಾದ್: ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಭಾನುವಾರದಂದು ಮತ್ತೊಮ್ಮೆ ಹ್ಯಾಕ್ ಆಗಿದೆ. ಕಳೆದ 10 ದಿನಗಳಲ್ಲಿ ಎರಡನೇ ಬಾರಿ ಖಾತೆ ಹ್ಯಾಕ್ ಆಗಿದೆ.

    ಎಐಎಂಐಎಂ ಟ್ವಿಟ್ಟರ್ ಖಾತೆಯು 6.78 ಲಕ್ಷ ಹಿಂಬಾಲಕರನ್ನು ಹೊಂದಿದೆ. ಭಾನುವಾರ ಯಾರೋ ಹ್ಯಾಕರ್​ಗಳು ಈ ಖಾತೆಯ ಹೆಸರನ್ನು ಟೆಸ್ಲಾ ಸಂಸ್ಥೆಯ ಸಿಇಒ ಆಗಿರುವ ಎಲಾನ್ ಮಸ್ಕ್ ಹೆಸರಿಗೆ ಬದಲಾಯಿಸಿದ್ದಾರೆ. ಅವರದ್ದೇ ಫೋಟೋ ಕೂಡ ಹಾಕಲಾಗಿದೆ. ನಂತರ, “”ಕ್ರಿಪ್ಟೋಕರೆನ್ಸಿಯನ್ನು ಹಣದ ಸಮಾನವಾಗಿ ಬಳಸುವುದರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ, ಆದರೆ ಕೆಲವು ರೀತಿಯ ಕೆಲಸಗಳ ಪರಿಣಾಮವಾಗಿ ಏನನ್ನಾದರೂ ಗಳಿಸುವ ಮಾರ್ಗವಾಗಿ ಬಳಸುತ್ತಿದ್ದೇನೆ. ಕ್ರಿಪ್ಟೋವನ್ನು ಪ್ರೀತಿಸಿ.” ಎಂದು ಬರೆದು ಟ್ವೀಟ್ ಮಾಡಲಾಗಿದೆ. ಇದಾದ ಕೆಲ ಕ್ಷಣಗಳ ನಂತರ ಖಾತೆ ಮತ್ತೆ ಪಕ್ಷದ ಹಿಡಿತಕ್ಕೆ ಸಿಕ್ಕಿದ್ದಾಗಿ ಹೇಳಲಾಗಿದೆ.

    ಒಂಬತ್ತು ದಿನಗಳ ಹಿಂದೆ ಇದೇ ರೀತಿ ಒಮ್ಮೆ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ಎಐಎಂಐಎಂ ಪಕ್ಷ ತಿಳಿಸಿದೆ. ಆಗ ಟ್ವಿಟ್ಟರ್ ಸಂಸ್ಥೆಯೊಂದಿಗೆ ಸಂಪರ್ಕ ಸಾಧಿಸಿಕೊಂಡು ಖಾತೆಯನ್ನು ಸರಿ ಮಾಡಿಸಿಕೊಳ್ಳಲಾಗಿತ್ತು ಎಂದು ತಿಳಿಸಲಾಗಿದೆ. ಈಗ ಮತ್ತೆ ಅದೇ ಸಮಸ್ಯೆ ಆಗಿರುವುದರಿಂದಾಗಿ ಹೈದರಾಬಾದ್ ಪೊಲೀಸರಿಗೆ ದೂರು ನೀಡುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

    ನನ್ನ ಜತೆ ಸೆಲ್ಫಿ ಬೇಕೆಂದರೆ ನೂರು ರೂಪಾಯಿ ಡೆಪಾಸಿಟ್ ಮಾಡ್ಬೇಕು! ಮಧ್ಯ ಪ್ರದೇಶ ಸಚಿವರ ಹೊಸ ರೂಲ್ಸ್!

    ರಾಜ್ಯದಲ್ಲಿ ಇಳಿಕೆಯಾದ ಸೋಂಕು: ಇಂದು 1,708 ಜನರಲ್ಲಿ ಕರೊನಾ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts