More

    1 ವರ್ಷದಲ್ಲಿ ಇಡ್ಲಿಗಾಗಿ 7 ಲಕ್ಷ ರೂ. ಖರ್ಚು ಮಾಡಿದ; ಈತ ಸಾಮಾನ್ಯನಲ್ಲ ಎಂದ್ರು ನೆಟ್ಟಿಗರು

    ಹೈದರಾಬಾದ್‌: ಇಡ್ಲಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇಡ್ಲಿ ಜತೆ ವಡೆ ಹಾಗೂ ಜಾಸ್ತಿ ಸಾಂಬರ್​ ಹಾಕಿ ಕೊಟ್ಟರೆ ಅದರ ರುಚಿಯೆ ಬೇರೆ ಇರುತ್ತದೆ. ನಾವು, ನೀವು ಈ ಇಡ್ಲಿ ತಿನ್ನಲು 50 ರೂ. ನಿಂದ 100 ರೂಪಾಯಿ ಖರ್ಚು ಮಾಡಿರಬಹುದು. ಆದರೆ ಇಲ್ಲೊಬ್ಬ ಮಾತ್ರ ಇಡ್ಲಿ ತಿನ್ನಲು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    idlivada

    ಹೈದರಾಬಾದ್‌ನ ಸ್ವಿಗ್ಗಿ ಗ್ರಾಹಕರೊಬ್ಬರು ಕಳೆದ 12 ತಿಂಗಳಲ್ಲಿ 7.3 ಲಕ್ಷ ರೂಪಾಯಿ ಮೌಲ್ಯದ ಇಡ್ಲಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಆನ್‌ಲೈನ್ ಫುಡ್ ಡೆಲಿವರಿ ಬಹಿರಂಗಪಡಿಸಿದೆ. ಇದು ‘ವಿಶ್ವ ಇಡ್ಲಿ ದಿನ’ವಾಗಿರುವ (ಮಾರ್ಚ್​ 30) ರ ಸಂದರ್ಭದಲ್ಲಿ ಈ ವಿಷಯ ಹೊರಬಂದಿದೆ.

    Idli Swiggy

    ಬೆಳಿಗ್ಗೆ 8 ರಿಂದ 10ರ ನಡುವೆ ಅನೇಕ ಇಡ್ಲಿಗಳನ್ನು ಆರ್ಡರ್ ಮಾಡುತ್ತಾರೆ. ಆದರೆ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೊಯಮತ್ತೂರು ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳ ಗ್ರಾಹಕರು ರಾತ್ರಿ ಊಟದ ಸಮಯದಲ್ಲಿ ಇಡ್ಲಿಗಳನ್ನು ತಿನ್ನುತ್ತಿದ್ದಾರೆ ಎಂದು ಸ್ವಿಗ್ಗಿ ಹೇಳಿಕೆಯಲ್ಲಿ ತಿಳಿಸಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಹೆಚ್ಚು ಇಡ್ಲಿಗಳನ್ನು ಆರ್ಡರ್ ಮಾಡುವ ಮೊದಲ ಮೂರು ನಗರಗಳಾಗಿವೆ, ನಂತರ ಮುಂಬೈ, ಪುಣೆ, ಕೊಯಮತ್ತೂರು, ದೆಹಲಿ, ವೈಜಾಗ್, ಕೋಲ್ಕತ್ತಾ ಮತ್ತು ವಿಜಯವಾಡ.

    1 ವರ್ಷದಲ್ಲಿ ಇಡ್ಲಿಗಾಗಿ 7 ಲಕ್ಷ ರೂ. ಖರ್ಚು ಮಾಡಿದ; ಈತ ಸಾಮಾನ್ಯನಲ್ಲ ಎಂದ್ರು ನೆಟ್ಟಿಗರು

    ಬೆಂಗಳೂರಿನಲ್ಲಿ ರವಾ ಇಡ್ಲಿ ವಿಶೇಷವಾಗಿ ಜನಪ್ರಿಯವಾಗಿದ್ದರೆ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನೆಯ್ಯಿ/ಕರಂ ಇಡ್ಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರಗಳಲ್ಲಿನ ಇಡ್ಲಿ ಆರ್ಡರ್‌ಗಳಲ್ಲಿ ತಟ್ಟೆ ಇಡ್ಲಿ ಮತ್ತು ಮಿನಿ ಇಡ್ಲಿ ಕೂಡ ಉತ್ತಮ ಸ್ಥಾನವನ್ನು ಪಡೆಯುತ್ತದೆ ಎಂದು ಸ್ವಿಗ್ಗಿ ಹೇಳಿದೆ.

    1 ವರ್ಷದಲ್ಲಿ ಇಡ್ಲಿಗಾಗಿ 7 ಲಕ್ಷ ರೂ. ಖರ್ಚು ಮಾಡಿದ; ಈತ ಸಾಮಾನ್ಯನಲ್ಲ ಎಂದ್ರು ನೆಟ್ಟಿಗರು

    ಬೆಂಗಳೂರಿನ ಆಶಾ ಟಿಫಿನ್ಸ್, A2B – ಬೆಂಗಳೂರಿನ ಅಡ್ಯಾರ್ ಆನಂದ ಭವನ, ಚೆನ್ನೈ, ಹೈದರಾಬಾದ್‌ನ ವರಲಕ್ಷ್ಮಿ ಟಿಫಿನ್ಸ್, ಚೆನ್ನೈನ ಶ್ರೀ ಅಕ್ಷಯಂ, ಬೆಂಗಳೂರಿನ ವೀಣಾ ಸ್ಟೋರ್ಸ್ ಇಡ್ಲಿಗಳಿಗೆ ಪ್ರಸಿದ್ಧವಾದ ಟಾಪ್ 5 ರೆಸ್ಟೋರೆಂಟ್‌ಗಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts