More

    ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 2.7 ಕೋಟಿ ರು. ಪಂಗನಾಮ!

    ತೆಲಂಗಾಣ: ಮ್ಯಾಟ್ರಿಮೋನಿಯಲ್ಲಿ ಜಾಲತಾಣದಲ್ಲಿ ಪರಿಚಯವಾದ ವಂಚಕನೋರ್ವ ಯುವತಿಯನ್ನು ನಂಬಿಸಿ ಬರೋಬ್ಬರಿ 2.71 ಕೋಟಿ ರು. ಹಣ ಪಡೆದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಅಸ್ಸಾಂ: ಪತ್ನಿಗೆ ತಪ್ಪಿದ ಲೋಕಸಭೆ ಟಿಕೆಟ್ ಕಾಂಗ್ರೆಸ್​ ತೊರೆದ ಶಾಸಕ!

    ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಭಾನುವಾರ ಆಂಧ್ರಪ್ರದೇಶದ ವಿಜಯವಾಡದಲ್ಲಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ನಂತರ ಆರೋಪಿಯನ್ನು ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ಸೈಬರಾಬಾದ್ ಕ್ರೈಂ ಡಿಸಿಪಿ ಕೊತ್ತಪಲ್ಲಿ ನರಸಿಂಹ ಮತ್ತು ಸೈಬರ್ ಕ್ರೈಂ ಎಸಿಪಿ ರವೀಂದರ್ ರೆಡ್ಡಿ ತಿಳಿಸಿದ್ದಾರೆ.

    ವಿಜಯವಾಡ ಸಮೀಪದ ಪೋರಂಕಿ ಗ್ರಾಮದ ಪೊಟ್ಲೂರಿ ಶ್ರೀಬಾಲ ವಂಶಿಕೃಷ್ಣ (37) ಬೆಟ್ಟಿಂಗ್ ಮತ್ತು ರೇಸಿಂಗ್ ಚಟ ಹೊಂದಿದ್ದು, ಹಣವಿಲ್ಲದೆ ಪರದಾಡುತ್ತಿದ್ದ. ವಂಚಕ ಮ್ಯಾಟ್ರಿಮೋನಿಯಲ್ ತಾಣದಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದ. ಆತನೇ ಸುಮಾರು ಆರು ಹುಡುಗಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆ ಯುವತಿಯರನ್ನು ನಂಬಿಸಿ ಅವರಿಂದ ಫೋನ್ ನಂಬರ್ ಪಡೆದು ಸಲುಗೆಯಿಂದ ಮಾತನಾಡಿದ್ದಾನೆ. ಕೆಲ ದಿನಗಳ ನಂತರ ತಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ವೀಸಾ ಪಡೆಯಲು ಸಿವಿಲ್ ಸ್ಕೋರ್ ಹೆಚ್ಚಿರಬೇಕು ಇದರಿಂದ ಸಾಲ ಬೇಕು ಎಂದು ಯುವತಿ ಬೆಳಿ ಬೇಡಿಕೆ ಇಟ್ಟಿದ್ದ. ತದನಂತರ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದ.

    ಅಮೆರಿಕದಲ್ಲಿ ಗ್ಲೆನ್ಮಾರ್ಕ್ ಪರ್ಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ಮದುವೆಯಾಗುವುದಾಗಿ ಹೇಳಿದ್ದಾನೆ. ಮದುವೆಯ ನಂತರ ತನ್ನೊಂದಿಗೆ ಅಮೆರಿಕಗೆ ಬರಲು ಪಾಲುದಾರ ವೀಸಾಗೆ ಸಿವಿಲ್​ ಸ್ಕೋರ್ 845 ಕ್ಕಿಂತ ಹೆಚ್ಚಿರಬೇಕು ಎಂದು ವಂಶಿಕೃಷ್ಣ ಯುವತಿಗೆ ನಂಬಿಸಿದ್ದಾನೆ. ಆಕೆಯ ಸಿವಿಲ್​ ಸ್ಕೋರ್ 743 ಆಗಿದೆ. ಇದನ್ನು ಹೆಚ್ಚಿಸಲು ಕಂಪನಿಯು ಸಾಲ ನೀಡಲಿದೆ ಎಂದು ಗ್ಲೆನ್ ಮಾರ್ಕ್ ಹೇಳಿದ್ದಾರೆ. ಯುವತಿಯನ್ನು ನಂಬಿಸಿ ಆಕೆಯ ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್, ಕಾರಿನ ಮೇಲೆ ಲೋನ್​ ಪಡೆದು ಶೀಘ್ರದಲ್ಲೇ ಹಣವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದ್ದರು.

    ಯುವತಿಯಿಂದ ಬರೋಬ್ಬರಿ ಇಬ್ಬರಿಂದಲೂ 2.71 ಕೋಟಿ ರೂ. ಹಣ ಪಡೆದಿದ್ದಾರೆ. ಇದಾದ ನಂತರ ವಂಚಕ ಯುವತಿಯ ಕರೆಗಳನ್ನು ಸ್ವೀಕರಿಸುವುದನ್ನು ಬಂದ್ ಮಾಡಿದ. ಇದರಿಂದಾಗಿ ತಾನು ಮೋದ ಹೋಗಿರುವುದು ತಿಳಿದು ಯುವತಿ ಪೊಲೀಸ್ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು.

    ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದ ಸೈಬರ್ ರೈಮ್ ಇನ್ಸ್‌ಪೆಕ್ಟರ್ ಎಸ್. ರಮೇಶ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ತೆಲಂಗಾಣದ ವಿವಿಧ ಭಾಗಗಳಲ್ಲಿ 7, ಎಪಿ ಮತ್ತು ತಮಿಳುನಾಡಿನಲ್ಲಿ ತಲಾ ಒಂದು ಪ್ರಕರಣಗಳಿವೆ.

    ಕೇರಳ: ಚಮಯವಿಳಕ್ಕು ಉತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts