ಅನ್ಯಕೋಮಿನ ಬಾಲಕಿಗೆ ಕಿರುಕುಳ

harasment
Published on

ಬಂಟ್ವಾಳ: ಅನ್ಯಕೋಮಿನ ಯುವಕನೋರ್ವ ಬಾಲಕಿಯ ಜತೆ ಅನುಚಿತವಾಗಿ ವರ್ತಿಸಿರುವ ಘಟನೆ ಪೊಳಲಿಯಲ್ಲಿ ಬುಧವಾರ ನಡೆದಿದ್ದು, ಆರೋಪಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಬಾಲಕಿಯ ಹಿಂದಿನಿಂದ ಬಂದು ಅಪ್ಪಿ ಹಿಡಿಯಲು ಯತ್ನಿಸಿದಲ್ಲದೆ ಆಕೆ ತಿರುಗಿ ನೋಡಲು ಕೂಡ ಅವಕಾಶ ನೀಡದೆ ಮೊಬೈಲ್ ನಂಬರ್ ಕೊಡುವಂತೆ ಪೀಡಿಸಿದ್ದ. ಇಲ್ಲದಿದ್ದರೆ ರೇಪ್ ಮಾಡದೆ ಬಿಡುವುದಿಲ್ಲ ಎಂದು ಬೆದರಿಸಿದಾಗ ಬಾಲಕಿ ಕಿರುಚಿದ್ದಾಳೆ. ಈ ವೇಳೆ ಬಾಲಕಿಯ ಸಂಬಂಧಿಕರೋರ್ವರು ಬಂದಿದ್ದು, ಆರೋಪಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net