More

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ತೆಲಂಗಾಣ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿಗೆ ಆಘಾತ ನೀಡಲು ಉದ್ದೇಶಿಸಿರುವ ಕಾಂಗ್ರೆಸ್​, ಭಾರತ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ. ತೆಲಂಗಾಣದ ಪ್ರಮುಖ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಹ್ವಾನ ನೀಡಲಾಗಿದೆ. ಸಾನಿಯಾ ಮಿರ್ಜಾ ಅವರು ನಿರ್ಧಾರ ಅಧಿಕೃತವಾಗಿ ಘೋಷಣೆಯಾಗುವ ಸುಳಿವು ಸಹ ಸಿಕ್ಕಿದೆ ಎನ್ನಲಾಗಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ತೆಲಂಗಾಣ ಮುಖ್ಯಮಂತ್ರಿ ಬಿಜೆಪಿ ಸೇರ್ಪಡೆ: ಕೆಟಿ ರಾಮರಾವ್

    ಸಾನಿಯಾ ಮಿರ್ಜಾ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದ್ದು ಒಂದು ವೇಳೆ ಕಾಂಗ್ರೆಸ್ ನಿರ್ಧಾರವನ್ನು ಒಪ್ಪಿಕೊಂಡ್ರೆ ಸಾನಿಯಾ ಮಿರ್ಜಾ ಅವರು ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಶುರುವಾಗಿದೆ ಹಾಕಿಕೊಂಡಿದೆ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಮೂಲಗಳ ಪ್ರಕಾರ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ಧೀನ್‌ ಮಿರ್ಜಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಜರುದ್ದೀನ್ ಮಿರ್ಜಾ ಕುಟುಂಬದೊಂದಿಗೆ ನಿಕಟ ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ. 2019ರಲ್ಲಿ ಸಾನಿಯಾ ಸಹೋದರಿ ಅನಮ್ ಮಿರ್ಜಾ ಅವರನ್ನು ಅಜರುದ್ಧೀನ್‌ ಮಗ ಮೊಹಮ್ಮದ್ ಅಸಾದುದ್ದೀನ್‌ ವಿವಾಹವಾಗಿದ್ದರು.

    ಓವೈಸಿ ಕೋಟೆ ಕೆಡವಲು ಮಿರ್ಜಾಗೆ ಟಿಕೆಟ್​?: ಹೈದರಾಬಾದ್ ಲೋಕಸಭಾ ಕ್ಷೇತ್ರವು ಐತಿಹಾಸಿಕವಾಗಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಭದ್ರಕೋಟೆಯಾಗಿದೆ. ಆದಾಗ್ಯೂ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಚಿಗಿತುಕೊಂಡಿತ್ತು. ಎಐಎಂಐಎಂನ ಪ್ರಾಬಲ್ಯಕ್ಕೆ ಸವಾಲನ್ನು ಒಡ್ಡಿದೆ. ಹೀಗಿದ್ದೂ ಗೆಲುವು ಮಾತ್ರ ಇನ್ನೂ ದಕ್ಕಿಲ್ಲ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    1980ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನ ಕೆಎಸ್ ನಾರಾಯಣ್ ಗೆದ್ದಿದ್ದೇ ಕೊನೆ. ನಂತರ ಪಕ್ಷ ಇಲ್ಲಿ ಗೆಲುವು ಸಾಧಿಸಿಲ್ಲ. 1984ರಲ್ಲಿ ಸುಲ್ತಾನ್ ಸಲಾವುದ್ದೀನ್ ಓವೈಸಿ ಸ್ವತಂತ್ರ ಅಭ್ಯರ್ಥಿಯಾಗಿ ಹೈದರಾಬಾದ್‌ನಲ್ಲಿ ಗೆಲುವು ಸಾಧಿಸಿದ್ದರು. ನಂತರ 1989 ರಿಂದ 1999 ರವರೆಗೆ ಈ ಕ್ಷೇತ್ರವನ್ನು ಎಐಎಐಎಂ ಪಕ್ಷದಿಂದ ಅವರು ಪ್ರತಿನಿಧಿಸಿದ್ದರು. ಬಳಿಕ ಅವರ ಹಿರಿಯ ಮಗ, ಹಾಲಿ ಸಂಸದ ಅಸಾದ್ದುದ್ದೀನ್‌ ಓವೈಸಿ ಇಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ.

    ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರು ಈ ಹಿಂದಿನ ಸರ್ಕಾರದಲ್ಲಿ ಹೈದರಾಬಾದ್‌ ನಗರಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಅವರಿಗಿರುವ ಪ್ರಸಿದ್ಧಿ ಮತ್ತು ಸೆಲೆಬ್ರಿಟಿ ಆಗಿರುವುದು ಲೋಕಸಭಾ ಚುನಾವಣೆಯಲ್ಲಿ ಸಹಕಾರಿಯಾಗಲಿದೆ. ಹೀಗಾಗಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಹೈದರಾಬಾದ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.

    ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ಅವರು ಸತತ 5ನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಓವೈಸಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾನಿಯಾ ಮಿರ್ಜಾ ಅವರನ್ನೇ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡುತ್ತಿದೆ.

    ಸಾನಿಯಾ ಮಿರ್ಜಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ನಗರದಲ್ಲಷ್ಟೇ ಅಲ್ಲ ರಾಜ್ಯದಲ್ಲೇ ಭಾರೀ ಸಂಚಲನ ಸೃಷ್ಟಿಸಿದೆ.

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts