More

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಉಭಯ ಪಕ್ಷಗಳಿಂದ ವಿವಿಧ ಕ್ಷೇತ್ರಗಳ ಗಣ್ಯರು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

    ಇದನ್ನೂ ಓದಿ: ದೇವೇಗೌಡರ ದೂರಿನ ಮೇಲೆ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ

    ಈ ಬಾರಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ರಾಜ್ಯದಲ್ಲಿ ಅಧಿಕಾರಕ್ಕೇರಲು ಕಸರಸ್ತು ಆರಂಭಿಸಿದ್ದಾರೆ. ಇದರ ಬೆನ್ನೆಲ್ಲೇ ಟಾಲಿವುಡ್​ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    roja

    ಹೌದು ನಟಿ ಅನುಷ್ಕಾ ಶೆಟ್ಟಿ ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ‘ಸೂಪರ್’ ಚಿತ್ರದ ಮೂಲಕ ಅನುಷ್ಕಾ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಹಲವು ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದರು. ಕೇವಲ ಸ್ಟಾರ್ ಹೀರೋ ಚಿತ್ರಗಳಲ್ಲಿ ನಾಯಕಿ ಆಗಿ ನಟಿಸುವುದು ಮಾತ್ರವಲ್ಲದೆ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ತೆಲಂಗಾಣ, ಆಂಧ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಕರಾವಳಿ ಬ್ಯೂಟಿ ಅನುಷ್ಕಾ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

    ಜನಸೇನಾ ನಾಯಕರ ಸಂಪರ್ಕದಲ್ಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನ್ನಡತಿಯಾಗಿ ಟಾಲಿವುಡ್​ನಲ್ಲಿ ಮಿಂಚಿದ ನಟಿ ಅನುಷ್ಕಾ ಶೆಟ್ಟಿ ರಾಜಕೀಯ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ ಎನ್ನಲಾಗಿದೆ. ಜನಸೇನಾ ಪಕ್ಷದ ನಾಯಕ, ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಪಕ್ಷದಿಂದ ಎಂಎಲ್​ಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಅನುಷ್ಕಾ ಜನಸೇನಾ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಈ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

    anushka

    ಅನುಷ್ಕಾ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು: ಕರಾವಳಿ ಬೆಡಗಿ ಅನುಷ್ಕಾ ಆಂಧ್ರಪ್ರದೇಶದ ನಗರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಇಲ್ಲಿ ಹಾಲಿ ಶಾಸಕಿ ಟಾಲಿವುಡ್​​ನ ಖ್ಯಾತ ನಟಿ, ಸಚಿವೆ ರೋಜಾ ಸೆಲ್ವಮನಿ ವಿರುದ್ಧ ಜನಸೇನಾ ಮತ್ತು ಟಿಡಿಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹೌದು.. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅನುಷ್ಕಾ ತಮ್ಮ ಎರಡನೇ ಇನಿಂಗ್ಸ್​ ಆರಂಭಿಸಲಿದ್ದಾರೆ. ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿರುವ ಅನುಷ್ಕಾ ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

    ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಆರ್ ಕೆ ರೋಜಾ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರೋಚಕ ಗೆಲುವು ಸಾಧಿಸಿದ್ದರು. ವೈಎಸ್‌ಆರ್‌ಸಿಪಿ ಪಕ್ಷದಿಂದ ನಗರಿ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದರು. ಟಿಡಿಪಿ ಅಭ್ಯರ್ಥಿ ಗಾಲಿ ಭಾನು ಪ್ರಕಾಶ್ ವಿರುದ್ಧ 2,630 ಅಂತರದೊಂದಿಗೆ ಗೆದ್ದಿದ್ದಾರೆ. 2014ರಲ್ಲಿ ಟಿಟಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣಮ ನಾಯ್ಡು ವಿರುದ್ಧ ಕೇವಲ 858 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

    ಜನಸೇನಾ ನಾಯಕ ಪವನ್​ ಕಲ್ಯಾಣ್​ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಅವರ ಮಗ ನಾರಾ ಲೋಕೇಶ್​ ವಿರುದ್ಧ ಸದಾ ಟೀಕಿಸುತ್ತಿರುವ ಹಾಲಿ ಶಾಸಕ ರೋಜಾ ಅವರನ್ನು ಈ ಬಾರಿ ಸೋಲಿಬೇಕೆಂದು ಪಣತೊಟ್ಟಿರುವ ಟಿಡಿಪಿ, ಜನಸೇನಾ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ಮಾಡುತ್ತಿದೆ. ಅನುಷ್ಕಾ ಶೆಟ್ಟಿ ಅಭ್ಯರ್ಥಿಯಾದರೆ ರೋಜಾಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಆಲೋಚನೆಯಲ್ಲಿದ್ದಾರೆ. ಆದರೆ ರಾಜಕೀಯ ಕ್ಷೇತ್ರಕ್ಕೆ ಬರುವ ಬಗ್ಗೆ ಅನುಷ್ಕಾ ಎಲ್ಲೂ ಮಾತನಾಡಿಲ್ಲ.

    ರೋಜಾ ಅವರು ಕೇವಲ ತೆಲುಗು, ತಮಿಳಿನ ಚಿತ್ರಗಳಲ್ಲಷ್ಟೇ ಅಲ್ಲದೆ ಕನ್ನಡದ ಗಡಿಬಿಡಿ ಗಂಡ, ಕಲಾವಿದ, ಪ್ರೇಮೋತ್ಸವ, ಇಂಡಿಪೆಂಡೆನ್ಸ್ ಡೇ, ಗ್ರಾಮದೇವತೆ, ಸುಂದರಕಾಂಡ, ಪರ್ವ, ಮೌರ್ಯ, ಶ್ರೀ ಚೌಡೇಶ್ವರಿ ದೇವಿ ಮಹಿಮೆ, ಶ್ರೀ ಓಂಕಾರ ಅಯ್ಯಪ್ಪ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ: ಶಿವಮೊಗ್ಗದಲ್ಲಿ ಪ್ರಬಲ ಅಭ್ಯರ್ಥಿಗಳ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts