More

    ರಾಮಲಲ್ಲಾ ಮೂರ್ತಿ ಕೆತ್ತನೆ ಆರಂಭ; ಕರ್ನಾಟಕದ ಇಬ್ಬರು ಶಿಲ್ಪಿಗಳು ಭಾಗಿ

    ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯ ರಾಮ ಮಂದಿರ 2024ರ ಆರಂಭದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದ್ದು ಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಶ್ರೀರಾಮ ಮೂರ್ತಿಯ ಕೆತ್ತನೆ ಕಾರ್ಯ ಆರಂಭವಾಗಿದೆ. ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಜೈಪುರದ ಒಬ್ಬ ಶಿಲ್ಪಿ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

    ಟ್ರಸ್ಟ್​ನ ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟಕದ ಗಣೇಶ ಭಟ್ ತಮ್ಮ ಶಿಷ್ಯ ವಿಪಿನ್ ಭದೋರಿಯಾರೊಂದಿಗೆ ಸೇರಿ ಕರ್ನಾಟಕದಿಂದ ಕಲ್ಲನ್ನು ಆಯ್ಕೆ ಮಾಡಿದ್ದಾರೆ. ಜೈಪುರದವರಾದ ಸತ್ಯನಾರಾಯಣ ಪಾಂಡೆ ಮತ್ತು ಅವರ ಪುತ್ರ, ಮಕ್ರಾನಾದಿಂದ ‘ಎ-ದರ್ಜೆಯ’ ಕಲ್ಲನ್ನು ಆಯ್ಕೆ ಮಾಡಿದ್ದಾರೆ. ಇನ್ನೊಬ್ಬ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ಕರ್ನಾಟಕದವರಾಗಿದ್ದು ಕರ್ನಾಟಕದ ವಿವಿಧ ಕಡೆಗಳಿಂದ ಕಲ್ಲುಗಳನ್ನು ತಂದಿದ್ದಾರೆ ಎಂದು ಟ್ರಸ್ಟ್ ಅಧಿಕಾರಿಗಳು ವಿವರಿಸಿದ್ದಾರೆ.

    ಸುಂದರವಾದ ವಿಗ್ರಹಗಳು

    ರಾಮಲಲ್ಲಾ ಮೂರ್ತಿಯ ಕೆತ್ತನೆ ಕಾರ್ಯ ವೇಗದಿಂದ ಸಾಗಿರುವಾಗಲೇ ದೇವಸ್ಥಾನದ ಅಂದವನ್ನು ಹೆಚ್ಚಿಸುವ ದಿಸೆಯಲ್ಲಿ ಅನೇಕ ಸುಂದರ ವಿಗ್ರಹಗಳನ್ನು ಕೂಡ ನಿರ್ವಿುಸಲಾಗುತ್ತಿದೆ. ಶಾಸ್ತ್ರಗಳಲ್ಲಿನ ಕಥೆಗಳ ಆಧಾರದಲ್ಲಿ ಈ ಮೂರ್ತಿಗಳನ್ನು ಕೆತ್ತಲಾಗುತ್ತಿದೆ. ಶ್ರೀ ರಾಮನ ಜನ್ಮಸ್ಥಳದಲ್ಲಿ ನಿರ್ವಣವಾಗುತ್ತಿರುವ ಭವ್ಯ ದೇವಸ್ಥಾನದ ಕಂಬಗಳು, ತಳಪಾಯ ಮತ್ತು ಇತರ ನಿಯೋಜಿತ ಸ್ಥಳಗಳಲ್ಲಿ ಈ ವಿಗ್ರಹಗಳನ್ನು ಜೋಡಿಸಲಾಗುತ್ತದೆ.

    ಪ್ರಥಮ ಹಂತ ಮುಕ್ತಾಯ

    ಟ್ರಸ್ಟ್​ನ ನಿರ್ಮಾಣ ಸಮಿತಿಯ ಪ್ರಕಾರ ರಾಮ ಮಂದಿರದ ಮೊದಲ ಹಂತ 2023 ಡಿಸೆಂಬರ್ 30ರಂದು ಪೂರ್ಣಗೊಳ್ಳಲಿದೆ. ಅದಾದ ನಂತರ ಭಕ್ತರು ದೇವಸ್ಥಾನವನ್ನು ಪ್ರವೇಶಿಸಬಹುದಾಗಿದೆ. ನೆಲ ಅಂತಸ್ತಿನ ಐದು ‘ಮಂಟಪಗಳನ್ನು’ ಮೊದಲ ಹಂತದಲ್ಲೇ ಪೂರ್ಣಗೊಳಿಸಲಾಗುತ್ತದೆ. ಈ ಪೈಕಿ ಗರ್ಭ ಗುಡಿ ಪ್ರಮುಖವಾಗಿದ್ದು ಅದರಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮೇ 22ರಂದು ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts