More

    ಭಾರತದ ಜಿಡಿಪಿ ಶೇ.7.2ಕ್ಕೆ ಏರಿಕೆ; ಪ್ರಧಾನಿ ಮೆಚ್ಚುಗೆ

    ನವದೆಹಲಿ: ಭಾರತದ ಒಟ್ಟು ಆಂತರಿಕ ಉತ್ಪನ್ನ ದರ (ಜಿಡಿಪಿ) 2022-23ರಲ್ಲಿ ಶೇ. 7.2ಕ್ಕೆ ಬೆಳವಣಿಗೆ ಕಂಡಿದ್ದು, ಚೀನಾದ ಜಿಡಿಪಿ (ಶೇ. 4.5)ಗಿಂತ ಮುಂದಿದೆ. ಆದರೆ, 2021-22ನೇ ಸಾಲಿನ ಜಿಡಿಪಿ (ಶೇ. 9.1)ಗಿಂತ ಶೇ. 1.9 ಕಡಿಮೆ ಇದೆ. 2022-23ರ ಕಡೆಯ ತ್ರೈಮಾಸಿಕ (ಜನವರಿ-ಮಾರ್ಚ್)ದಲ್ಲಿ ಜಿಡಿಪಿ ಶೇ. 6.1ರ ಪ್ರಗತಿ ದಾಖಲಿಸಿದೆ.

    ಕೃಷಿ, ತಯಾರಿಕೆ, ಗಣಿ, ಕಟ್ಟಡ ಕಾಮಗರಿ ವಲಯದ ಪ್ರಗತಿಯಿಂದಾಗಿ ಜಿಡಿಪಿಯಲ್ಲಿ ಏರಿಕೆ ಆಗಿದೆ, ಈ ಬೆಳವಣಿಗೆಯಿಂದ ಭಾರತದ ಆರ್ಥಿಕತೆ 272.41 ಲಕ್ಷ ಕೋಟಿ ರೂ. (3.30 ಟ್ರಿಲಿಯನ್ ಡಾಲರ್) ಮುಟ್ಟಿದ್ದು, ಮುಂದಿನ ಕೆಲ ವರ್ಷದಲ್ಲಿ 5 ಟ್ರಿಲಿಯನ್ ಡಾಲರ್ ಮುಟ್ಟುವ ಕನಸಿಗೆ ನೀರೆರೆದಿದೆ ಎಂದು ಬುಧವಾರ ಜಿಡಿಪಿ ಅಂಕಿಅಂಶ ಬಿಡುಗಡೆ ಮಾಡಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಹೇಳಿದೆ. ಫೆಬ್ರವರಿಯಲ್ಲಿ ಜಿಡಿಪಿ ಕುರಿತಂತೆ ಎನ್​ಎಸ್​ಒ ಬಿಡುಗಡೆ ಮಾಡಿದ್ದ ಎರಡನೇ ಅಂದಾಜು ವರದಿಯಲ್ಲಿ ಶೇ. 7ರ ಜಿಡಿಪಿ ನಿರೀಕ್ಷಿಸಿತ್ತು. ರೂಪಾಯಿ ಲೆಕ್ಕದಲ್ಲಿ ಜಿಡಿಪಿ 160.06 ಲಕ್ಷ ಕೋಟಿ ಇದ್ದು. ಮೊದಲ ಅಂದಾಜಿನಲ್ಲಿ ಇದನ್ನು 149.26 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಚಾಲ್ತಿ ದರದಲ್ಲಿ ಆರ್ಥಿಕ ಬೆಳವಣಿಗೆಯು 272.41 ಲಕ್ಷ ಕೋಟಿ ರೂ.ಗೆ ಹಿಗ್ಗಿದೆ. 2021-22ಕ್ಕೆ ಹೋಲಿಸಿದರೆ ಶೇ. 16ರಷ್ಟು ಏರಿಕೆ ದಾಖಲಿಸಿದೆ. 2021-22ನೇ ಸಾಲಿನಲ್ಲಿ ಇದು 234.71 ಲಕ್ಷ ಕೋಟಿ ರೂ. (2.80 ಟ್ರಿಲಿಯನ್ ಡಾಲರ್) ಇತ್ತು.

    ಭಾರತದ ಜಿಡಿಪಿ ಶೇ.7.2ಕ್ಕೆ ಏರಿಕೆ; ಪ್ರಧಾನಿ ಮೆಚ್ಚುಗೆ

    2022-23ನೇ ಕಡೆಯ ತ್ರೈಮಾಸಿಕದಲ್ಲಿ ಜಿಡಿಪಿ ರೂಪಾಯಿ ಲೆಕ್ಕಚಾರ 43.62 ಲಕ್ಷ ಕೋಟಿ ಇದ್ದರೆ, 2021-22ನೇ ಕಡೆಯ ತ್ರೈಮಾಸಿಕದಲ್ಲಿ ಇದು 41.12 ಲಕ್ಷ ಕೋಟಿ ರೂ. ಇತ್ತು. 2011-12ರಿಂದಲೂ ಚತುರ್ಥ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿಯ ಹಾದಿಯಲ್ಲೇ ಇದೆ. 2022-23ರ ಒಟ್ಟಾರೆ ರಾಷ್ಟ್ರೀಯ ಆದಾಯ 3,80,964 ಕೋಟಿ ರೂ. ಇದ್ದು, ಹಿಂದಿನ ಆರ್ಥಿಕ ಸಾಲಿನಲ್ಲಿ ಇದು 4,47,182 ಕೋಟಿ ರೂ. ಇತ್ತು ಎಂದು ಎನ್​ಎಸ್​ಒ ವಿವರಿಸಿದೆ.

    ಜಿವಿಎಯಲ್ಲಿ ಬೆಳವಣಿಗೆ

    ಒಟ್ಟಾರೆ ಮೌಲ್ಯ ಕ್ರೋಡೀಕರಣದ (ಜಿವಿಎ) ಪ್ರಗತಿ ಶೇ. 7 ಇದ್ದು, ಹಿಂದಿನ ಆರ್ಥಿಕ ಸಾಲಿಗಿಂತ (ಶೇ. 8.8) ಇಳಿಕೆ ಎನಿಸಿದರೂ ಕಡೆಯ ತ್ರೈಮಾಸಿಕದಲ್ಲಿ ಇದು ಬೆಳವಣಿಗೆ ದಾಖಲಿಸಿದೆ. 2022-23ರ ಕಡೆಯ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಜಿವಿಎ ಶೇ. 4.5 ಇದ್ದರೆ ಹಿಂದಿನ ಸಾಲಿನ ಇದೇ ತ್ರೖೆಮಾಸಿಕದಲ್ಲಿ ಇದು ಶೇ. 0.6 ಇತ್ತು. ಗಣಿಗಾರಿಕೆಯ ಜಿವಿಎ ಶೇ. 2.3ರಿಂದ ಶೇ. 4.3ಕ್ಕೆ ಕಟ್ಟಡ ನಿರ್ವಣದಲ್ಲಿ ಶೇ. 4.9ರಿಂದ ಶೇ. 10.4ಕ್ಕೆ , ಕೃಷಿಯಲ್ಲಿ ಶೇ. 4.1ರಿಂದ ಶೇ. 5.5ಕ್ಕೆ ಹಾಗೂ ವಿದ್ಯುತ್, ಗ್ಯಾಸ್, ನೀರು ಪೂರೈಕೆ ಇನ್ನಿತರ ನಾಗರಿಕ ಸೇವೆಗಳಲ್ಲಿ ಶೇ. 6.7ರಿಂದ ಶೇ. 6.9ಕ್ಕೆ ಮತ್ತು ವಾಣಿಜ್ಯ, ಹೋಟೆಲ್, ಸಾರಿಗೆ, ಸಂಪರ್ಕ ಇನ್ನಿತರ ಸೇವೆಗಳಲ್ಲಿ ಶೇ. 5ರಿಂದ ಶೇ. 9.1ಕ್ಕೆ ಜಿವಿಎ ಬೆಳವಣಿಗೆ ಕಂಡಿದೆ. ಆದರೆ, ಸಾರ್ವಜನಿಕ ಆಡಳಿತ, ರಕ್ಷಣೆ ಇನ್ನಿತರ ಸೇವೆಗಳ ಜಿವಿಎ ಶೇ. 3.1 ಇದ್ದು, ಹಿಂದಿನ ಸಾಲಿನ ತ್ರೈಮಾಸಿಕಕ್ಕಿಂತ (ಶೇ. 5.2) ಕಡಿಮೆ ಇದೆ.

    ಭಾರತದ ಜಿಡಿಪಿ ತೃಪ್ತಿಕರವಾಗಿದ್ದು, ಜಾಗತಿಕ ಆರ್ಥಿಕ ಸವಾಲುಗಳ ನಡುವೆ ಸ್ಥಿತಿಸ್ಥಾಪಕತ್ವವನ್ನು ಕಾಯ್ದು ಕೊಂಡಿದೆ. ದೇಶದ ಆರ್ಥಿಕತೆ ಬೆಳವಣಿಗೆಯು ಭರವಸೆಯ ಪಥದಲ್ಲಿ ಇದ್ದು, ಆರ್ಥಿಕ ಕಾರ್ಯಕ್ಷಮತೆಯು ಬಲವಾದ ಆಶಾವಾದವನ್ನು ಸೂಚಿಸಿದೆ.
    | ನರೇಂದ್ರ ಮೋದಿ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts