15 ವರ್ಷದ ಬಾಲಕಿಯ ಮೇಲೆ 19 ವಿದ್ಯಾರ್ಥಿಗಳನ್ನು ಹತ್ಯೆಗೈದ ಆರೋಪ..!

gayana fire
Published on

ಗಯಾನಾ: 15 ವರ್ಷದ ಬಾಲಕಿಯ ಮೇಲೆ 19 ಸಹಪಾಠಿಗಳ ಕೊಲೆಗಳ ಆರೋಪ ಹೊರಿಸಿರುವ ವಿಚಿತ್ರ ಘಟನೆ ಗಯಾನಾದ ಜಾರ್ಜ್​ಟೌನ್​ನಲ್ಲಿ ನಡೆದಿದೆ.

ಬಾಲಕಿಯನ್ನು ಗಯಾನಾದ ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆಯ ಬಳಿಯಿದ್ದ ಸ್ಮಾರ್ಟ್​ಫೋನ್​ನ್ನು ಕಸಿದುಕೊಂಡದ್ದಾಗಿ ಆಕೆ ಶಾಲಾ ವಸತಿ ನಿಲಯಕ್ಕೆ ಬೆಂಕಿ ಹಚ್ಚಿ 19 ಮಕ್ಕಳ ಸಾವಿಗೆ ಕಾರಣವಾಗಿದ್ದಳು ಎಂದು ಆರೋಪಿಸಲಾಗಿದೆ.

ಕಳೆದ ಸೋಮವಾರ ಮುಂಜಾನೆ ವಸತಿ ನಿಲಯದ ಸ್ನಾನಗೃಹದ ಪ್ರದೇಶದಲ್ಲಿ ಬೆಂಕಿ ಮತ್ತು ಹೊಗೆಯನ್ನು ಕಂಡ ತಕ್ಷಣವೇ ಅನೇಕರು ಎಚ್ಚರಗೊಂಡು ಕಿರುಚಾಡತೊಡಗಿದರು. ಬೆಂಕಿಯ ಜ್ವಾಲೆ ಇಡೀ ವಸತಿನಿಲಯಕ್ಕೆ ಪಸರಿಸಿದ ಕಾರಣ ಸುಮಾರು 19 ಮಕ್ಕಳು ಮೃತಪಟ್ಟಿದ್ದು, 30 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಎನ್‌ಎ ಪರೀಕ್ಷೆಯ ಮೂಲಕ 13 ವಿದ್ಯಾರ್ಥಿಗಳ ಗುರುತನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅವಶೇಷಗಳನ್ನು ಅವರವರ ಕುಟುಂಬಗಳಿಗೆ ಹಿಂತಿರುಗಿಸಲಾಗಿದೆ. ವಸತಿ ನಿಲಯದ ಅಗ್ನಿಶಾಮಕ ನಿಯಂತ್ರಕ ವ್ಯವಸ್ಥೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಗಯಾನಾದ ಶಿಕ್ಷಣ ಸಚಿವ ಪ್ರಿಯಾ ಮಾಣಿಕ್‌ಚಂದ್ ಹೇಳಿದ್ದಾರೆ.(ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net