More

    ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ

    ಬೆಂಗಳೂರು: ಪರಿಸರ ದಿನಾಚರಣೆ ಅಂಗವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸಹಯೋಗ ಮತ್ತು ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಚಾನಲ್ ವತಿಯಿಂದ ಭಾನುವಾರ (ಜೂ. 4) ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 7ರಿಂದ 16 ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

    ಸ್ಪರ್ಧೆ ಎಲ್ಲಿ? ಯಾವಾಗ?

    ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಮಕ್ಕಳ ಕೂಟ ಆವರಣ. ಭಾನುವಾರ (ಜೂ.4) ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ.

    ಇದನ್ನೂ ಓದಿ: ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ

    ಏನು ತರಬೇಕು?

    ಸ್ಪರ್ಧಾ ವಿಷಯ: ‘ಪರಿಸರ ಜಾಗೃತಿ’ ಕುರಿತು ಸ್ಥಳದಲ್ಲೇ ಚಿತ್ರ ಬಿಡಿಸಬೇಕು. ಡ್ರಾಯಿಂಗ್ ಶೀಟ್​ಗಳನ್ನು ನಾವೇ ಕೊಡುತ್ತೇವೆ. ಪ್ಯಾಡ್, ಪೆನ್ಸಿಲ್, ಸ್ಕೆಚ್ ಪೆನ್, ಸ್ಕೇಲ್ ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ಮಕ್ಕಳೇ ತರಬೇಕು.

    ನೋಂದಣಿ ಉಚಿತ

    ಸ್ಪರ್ಧೆಗೆ ನೋಂದಣಿ ಉಚಿತ ವಾಗಿರಲಿದೆ. ಆಸಕ್ತ ಮಕ್ಕಳು ದೂ: 88844 32666ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಅಥವಾ ಜೂ. 4ರಂದು ಸ್ಥಳದಲ್ಲೇ ಹೆಸರು ನೋಂದಣಿ ಮಾಡಬಹುದು.

    Painting Comp 1

    ರಾಮಲಲ್ಲಾ ಮೂರ್ತಿ ಕೆತ್ತನೆ ಆರಂಭ; ಕರ್ನಾಟಕದ ಇಬ್ಬರು ಶಿಲ್ಪಿಗಳು ಭಾಗಿ

    ಕಳೆದುಹೋಗಿದ್ದ ದುಬಾರಿ ಐಫೋನ್ ಕೆಲವೇ ಗಂಟೆಗಳಲ್ಲಿ ಪತ್ತೆ! ಸ್ವಿಚ್ ಆಫ್ ಆಗಿದ್ದ ಮೊಬೈಲನ್ನು ಪತ್ತೆಹಚ್ಚಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts