More

    ಕಳೆದುಹೋಗಿದ್ದ ದುಬಾರಿ ಐಫೋನ್ ಕೆಲವೇ ಗಂಟೆಗಳಲ್ಲಿ ಪತ್ತೆ! ಸ್ವಿಚ್ ಆಫ್ ಆಗಿದ್ದ ಮೊಬೈಲನ್ನು ಪತ್ತೆಹಚ್ಚಿದ್ಹೇಗೆ?

    ಕೊಚ್ಚಿ: ಮಹಿಳಾ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ದುಬಾರಿ ಐಫೋನ್​ ಅನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವ ಮೂಲಕ ಕೇರಳದ ಪೊಲೀಸರು ತಮ್ಮ ವೃತ್ತಿಪರತೆ ಮೆರೆದಿದ್ದಾರೆ.

    ಚಾಲಕುಡಿ ಮೂಲದ ಶಂಕರಿ ಸುಜಾ ಅವರು ಕೊಚ್ಚಿಯ ಪುತ್ತುವೈಪೆ ಬೀಚ್‌ಗೆ ಭೇಟಿ ನೀಡಿದಾಗ 2 ಲಕ್ಷ ರೂ. ಮೌಲ್ಯದ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ವೈಜ್ಞಾನಿಕ ತನಿಖೆಯಿಂದ ಸ್ವಿಚ್ ಆಫ್ ಆಗಿದ್ದ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

    ಇದನ್ನೂ ಓದಿ: ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ

    ಶಂಕರಿ ಅವರ ಪತಿ ಯುಎಸ್‌ಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೋನ್​ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ಡೇಟಾ ಇತ್ತು. ಮೇ 29 ರಂದು ಫೋನ್​ ಕಳೆದುಹೋಗಿತ್ತು. ಶಂಕರಿ ಅವರು ಸುದೀರ್ಘ ಹುಡುಕಾಟದ ನಂತರ ಮುಳವುಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆಯ ನಡೆಸಿದಾಗ ಎರ್ನಾಕುಲಂ ನಾರ್ತ್ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಫೋನ್ ಪತ್ತೆಯಾಯಿತು.

    ಶಂಕರಿ ಸುಜಾ ಮತ್ತು ಅವರ ಸಂಬಂಧಿಕರು ಫೋನ್ ವಾಪಸ್ ಪಡೆದ ಖುಷಿಯಲ್ಲಿ ಪೊಲೀಸರನ್ನು ಶ್ಲಾಘಿಸಿ, ಧನ್ಯವಾದ ಅರ್ಪಿಸಿ ಹಿಂತಿರುಗಿದರು. ಮುಳವುಕಾಡು ಸಬ್ ಇನ್ಸ್​ಪೆಕ್ಟರ್ ಎನ್.ಜೆ.ಸುನೇಖ್, ಎಎಸ್​ಐ ನಾಸರ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ರಾಜೇಶ್, ಅರುಣ್ ಬಾಬು, ಸಿಬಿಲ್ ಭಾಸಿ ಅವರು ಫೋನ್​ಗಾಗಿ ಹುಡುಕಾಟ ನಡೆಸಿದರು. (ಏಜೆನ್ಸೀಸ್​)

    ಸಿಎಂ ಸಿದ್ದರಾಮಯ್ಯ ಸಲಹೆಗಾರರಾಗಿ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ನೇಮಕ

    ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts