ಪಂಚಲಿಂಗ ದರ್ಶನ ಮಹೋತ್ಸವ: ಪಂಚಲಿಂಗ ದರ್ಶನ ಪೂಜೆ ಸಂಪನ್ನ

Talakadu panchalinga darshana 1
Published on

ಮೈಸೂರು: ತಿ. ನರಸೀಪುರ ತಾಲೂಕು ತಲಕಾಡಿನ ಪಂಚಲಿಂಗದರ್ಶನ ಮಹೋತ್ಸವದ ಪ್ರಮುಖ ಕಾರ್ಯಕ್ರಮ ಪಂಚಲಿಂಗ ದರ್ಶನ ಪೂಜಾ ಮಹೋತ್ಸವವು ಕಡೆ ಕಾರ್ತಿಕ ಸೋಮವಾರ ದಂದು ಮುಂಜಾನೆ 4 30ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನೆರವೇರಿತು. ಸೋಮವಾರ ಮುಂಜಾನೆ 4.30ಕ್ಕೆ ಸಲ್ಲುವ ಶುಭ ಲಗ್ನವಾದ ವೃಶ್ಚಿಕ ಲಗ್ನದಲ್ಲಿ ಏಕ ಕಾಲದಲ್ಲಿ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರ ಅಭಿಷೇಕ ನೆರವೇರಿಸಲಾಯಿತು. ಪ್ರಧಾನ ದೇಗುಲವಾದ ವೈದ್ಯನಾಥೇಶ್ವರನಿಗೆ ಆನಂದ್ ದೀಕ್ಷಿತ್ ಅವರ ನೇತೃತ್ವದಲ್ಲಿ ರುದ್ರ ಪಾರಾಯಣದೊಂದಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿತು.

ಐತಿಹಾಸಿಕ ಪಂಚಲಿಂಗ ದರ್ಶನ ವೈಭವ ಶ್ರೀ ವೈದ್ಯನಾಥನ ಸನ್ನಿಧಿಯಲ್ಲಿ ಮೇಳೈಸಿದ ಧಾರ್ಮಿಕ ಕೈಂಕರ್ಯಗಳು. ನಸುಕಿನಲ್ಲೇ ಕಲ್ಯಾಣಿಯಿಂದ ಪವಿತ್ರ ಜಲಾಗಮನವಾಗಿದೆ. ಪೂರ್ಣಕುಂಭದಲ್ಲಿ ಹೊಸ ನೀರು ಹೊತ್ತು ತಂದ ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ಅವರಿಂದ ಶ್ರೀ ವೈದ್ಯನಾಥನಿಗೆ ಮುಂಜಾವಿನ ಮಹಾಭಿಷೇಕ ನಡೆಯಿತು. ಕುಹುಯೋಗ, ಜೇಷ್ಠ ನಕ್ಷತ್ರದ ಮುಂಜಾನೆ 4.30ರಿಂದ 7.30ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮಹಾಭಿಷೇಕ ಸಂಪನ್ನವಾಗಿದ್ದು, ಮುಂಡಿಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಶಾಸಕರಾದ ಎಂ.ಅಶ್ವಿನ್ ಕುಮಾರ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ವರ್ಚ್ಯುಯಲ್ ಮೂಲಕ ಸಾರ್ವಜನಿಕರಿಗೆ ಪಂಚಲಿಂಗ ದರ್ಶನಕ್ಕೆ ಅನುವು ಮಾಡಲಾಯಿತು. ದೇವಾಲಯದ ಒಳಾಂಗಣದಲ್ಲಿ ಆನ್‌ಲೈನ್ ದರ್ಶನ ಉದ್ಘಾಟನೆಯಾಗಿದೆ.

ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕಡೆಯ ಸೋಮವಾರ ಅಮವಾಸ್ಯೆ ಬಂದರೆ ಆ ದಿನ ಪಂಚಲಿಂಗ ದರ್ಶನ ಪೂಜಾ ಮಹೋತ್ಸವ ನಡೆಯುತ್ತದೆ. ಇದು ಮಾತ್ರವಲ್ಲದೇ ಅನುರಾಧ, ಜೇಷ್ಠಾ ಅಥವಾ ವಿಶಾಖ ನಕ್ಷತ್ರ ಗಳಲ್ಲಿ  ಯಾವುದಾದರೊಂದು ನಕ್ಷತ್ರ ಬದು ಸೂರ್ಯ ಚಂದ್ರ ರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ ಆ ದಿನದ ಉಷಾ ಕಾಲದಲ್ಲಿ ಬರುವ ಕುಹೂ ಯೋಗ, ಅಥವಾ ಪದ್ಮಕ ಯೋಗವು ಅತ್ಯಂತ ಫಲಪ್ರದಾಯಕ ಕಾಲವಾಗಿರುತ್ತದೆ. ಈ ವೇಳೆ ಪಂಚಲಿಂಗ ದರ್ಶನದ ಪುಣ್ಯಕಾಲ ಎಂದು ಕರೆಯಲಾಗುತ್ತದೆ.

ಈ ಪುಣ್ಯ ಕಾಲ ಪ್ರತಿ ಸಂವತ್ಸರದಲ್ಲಿ ಬರುವುದಿಲ್ಲ. 3 ರಿಂದ 14 ವರ್ಷದೊಳಗೆ ಒಮ್ಮೆ ಒಂದು ಸಂವತ್ಸರದಲ್ಲಿ ಬರುತ್ತದೆ. ಆಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದೆ.  ಪಂಚಲಿಂಗ ದರ್ಶನ ದಿನದಂದು ಭಕ್ತರು ನದಿಯಲ್ಲಿ ಮಿಂದು ಐದು ದೇವಾಲಯಗಳಿಗೂ ಭೇಟಿ ನೀಡಿ ಪಂಚಲಿಂಗ ದರ್ಶನ ಮಾಡಿ ಪುನೀತರಾಗುವುದು ವಾಡಿಕೆ. ತಲಕಾಡಿನಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಪಂಚಮುಖಗಳ ಶಿವನನ್ನು  ಅರ್ಕೆಶ್ವರ, ಮುಡುಕುತೊರೆ ಮಲ್ಲಿಕಾರ್ಜುನ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದ್ದು, ಈಶಾನ ಮುಖವೇ ಶಿವನ ಪ್ರಧಾನ ಮುಖವಾದಕಾರಣ ವೈದ್ಯಾನಾಥೇಶ್ವರನಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.

ಕಳೆದ 2013 ರಲ್ಲಿ ನಡೆದ ಪಂಚಲಿಂಗ ದರ್ಶನದಲ್ಲಿ ನಡೆದ 10 ದಿನಗಳ ಉತ್ಸವದಲ್ಲಿ 6-7 ಲಕ್ಷ ಮಂದಿ ರಾಜ್ಯವಲ್ಲದೇ ನೆರೆ ರಾಜ್ಯಗಳಿಂದ ಭಕ್ತರು ಭಾಗವಹಿಸಿದ್ದರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಲಭ್ಯವಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ಮಾಡಿಸಿಕೊಂಡು ದರ್ಶನ ಮಾಡಲು ಸೂಚಿಸಲಾಗಿದೆ. ಪಂಚಲಿಂಗ ದರ್ಶನದ ವಿಷಯ ಪೂಜೋತ್ಸವ ಕಾರ್ಯಕ್ರಮ ವರ್ಚ್ಯುಯಲ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಪಂಚಲಿಂಗ ದರ್ಶನಕ್ಕೆ ಮುಖ್ಯಮಂತ್ರಿ ಗೈರು:  ತಲಕಾಡಿಗೆ ಆಗಮಿಸದ ಸಿಎಂ ಬಿ.ಎಸ್.ಯಡಿಯೂರಪ್ಪ. ಮಹಾಭಿಷೇಕ ಬಳಿಕ ಸಿಎಂ ಪೂಜಾ ವಿಧಿವಿಧಾನ ನೆರವೇರಿಸುವುದು ವಾಡಿಕೆ. 1993ರಿಂದ ನಡೆದ ಎಲ್ಲ ಪಂಚಲಿಂಗ ದರ್ಶನದಲ್ಲೂ ಸಿಎಂಗಳೇ ಪೂಜೆ ಮಾಡಿದ್ದಾರೆ. 2009ರಲ್ಲಿ ಯಡಿಯೂರಪ್ಪ ಅವರೇ ನಡುರಾತ್ರಿ ಪೂಜೆ ನೆರವೇರಿಸಿದ್ದರು. ಈ ಬಾರಿ ಪಂಚಲಿಂಗ ದರ್ಶನ ಮಾಡದ ಬಿಎಸ್‌ವೈ. ಸಿಎಂ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಪೂಜೆ.

video
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net