ರೈಲು ನಿಲ್ದಾಣದ ಹೊರಭಾಗದಲ್ಲಿ ಸಿಕ್ಕ ಸಿಕ್ಕ ಮಹಿಳೆಯರಿಗೆ ಚುಂಬಿಸುತ್ತಿದ್ದ ಸರಣಿ ಕಿರುಕುಳ ಆರೋಪಿ ಬಂಧನ

MUMBAI CRIME feb 06
Published on

ಮುಂಬೈ: ರೈಲು ನಿಲ್ದಾಣದ ಹೊರಗಿನ ಸೇತುವೆಯಲ್ಲಿ ಸಿಕ್ಕ ಸಿಕ್ಕ ಮಹಿಳೆಯರನ್ನು ಹಿಡಿದು ಚುಂಬಿಸುತ್ತಿದ್ದ ಸರಣಿ ಕಿರುಕುಳ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮಾತುಂಗ ರೈಲು ನಿಲ್ದಾಣದ ಸೇತುವೆ ಬಳಿ ಮಹಿಳೆಯರೊಂದಿಗೆ ಆರೋಪಿ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಮುಂದಿನ ಪರಿಣಾಮಗಳ ಬಗ್ಗೆ ಭಯವಿಲ್ಲದೆ ಚುಂಬಿಸುತ್ತಿದ್ದ. ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಕಳ್ಳತನದ ಆರೋಪದ ಮೇಲೆ ಈಗಾಗಲೇ ಬಂಧನವಾಗಿದ್ದ ಆರೋಪಿಯಿಂದಲೇ ಈ ಕೃತ್ಯ ನಡೆದಿದೆ. ಇವನ ವಿರುದ್ಧ ಕಳ್ಳತನದ ದೂರುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಮೇಲೆ ಬಂಧಿತನಾಗಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಅನುಚಿತ ವರ್ತನೆ ಬಗ್ಗೆ ಪೊಲೀಸರು ಈವರೆಗೆ ದೂರನ್ನು ದಾಖಲಿಸಿಕೊಂಡಿಲ್ಲ. ಸಂತ್ರಸ್ಥ ಮಹಿಳೆಯೇ ಮುಂದೆ ಬಂದು ದೂರು ಸಲ್ಲಿಸಬಹುದು ಎನ್ನುವುದು ಪೊಲೀಸರ ಅಭಿಪ್ರಾಯ.

ಜನವರು 25ರಂದು ಕೃತ್ಯ ನಡೆದಿದ್ದ, ಆರೋಪಿ ಒತ್ತಾಯಪೂರ್ವಕವಾಗಿ ಚುಂಬಿಸುತ್ತಾನೆ. ಗಾಬರಿಗೊಂಡ ಮಹಿಳೆ ಸುತ್ತಮುತ್ತ ನೋಡಿ, ಆತುರದಿಂದ ದೂರ ಹೋಗುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net