The Bengal Files: 2022ರಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಕಾಶ್ಮೀರಿ ಪಂಡಿತರ ವಲಸೆ ಹಿಂದಿದ್ದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಇದೀಗ ಮತ್ತೊಂದು ‘ಫೈಲ್ಸ್’ನೊಂದಿಗೆ ಸಿನಿಪ್ರೇಕ್ಷಕರ ಎದುರು ಹಾಜರಾಗಲು ಸಜ್ಜಾಗಿದ್ದಾರೆ. ಅದಾದ ಬಳಿಕ ಮತ್ತೊಂದು ಫೈಲ್ಸ್ ಲೋಕಕ್ಕೆ ನುಸುಳಿರುವ ನಿರ್ದೇಶಕರು, ಇದೀಗ ‘ದಿ ಬೆಂಗಾಲ್ ಫೈಲ್ಸ್’ಗೆ ಕೈಹಾಕಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!: ವಿಡಿಯೋ ವೈರಲ್ | Revolver
ಈ ಹಿಂದೆ ‘ದಿ ಡೆಲ್ಲಿ ಫೈಲ್ಸ್’ ಎಂಬ ಶೀರ್ಷಿಕೆ ಇಟ್ಟಿದ್ದ ವಿವೇಕ್, ನಂತರದಲ್ಲಿ ಅದನ್ನು ‘ದಿ ಬೆಂಗಾಲ್ ಫೈಲ್ಸ್’ ಎಂದು ಮರುನಾಮಕರಣ ಮಾಡಿದರು. ಈ ಚಿತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ ಹಾಗೂ ನಿರ್ಮಾಪಕಿಯಾದ ಪಲ್ಲವಿ ಜೋಶಿ ಕೂಡ ಅಭಿನಯಿಸುತ್ತಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ರಾಧಿಕಾ ಮೆನನ್ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ಪಲ್ಲವಿ, ಬಹುನಿರೀಕ್ಷಿತ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ಕೂಡ ಮಾಡುತ್ತಿದ್ದಾರೆ.
ಸವಾಲೇ ನಿಜ
‘ದಿ ಬೆಂಗಾಲ್ ಫೈಲ್ಸ್’ ಚಿತ್ರದಲ್ಲಿ ಶತಾಯುಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪಲ್ಲವಿ, “ಇದು ನಿಜಕ್ಕೂ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು. 100 ವರ್ಷದ ವೃದ್ಧೆಯಂತೆ ಕಾಣುವುದು ಕಷ್ಟಕರ. ಹೆಚ್ಚಿನ ಪ್ರಾಸ್ಥೆಟಿಕ್ಸ್ ನನ್ನನ್ನು ಭಯಾನಕವಾಗಿ ಕಾಣುವಂತೆ ಮಾಡಿತು. ಈ ಪಾತ್ರಕ್ಕೆ ಪೂರ್ವತಯಾರಿ ಮಾಡಿಕೊಳ್ಳುವಾಗ ನನಗೆ ಮೊದಲು ನೆನಪಾಗಿದ್ದೇ ನನ್ನ ಅಜ್ಜಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ! | Model Sheetal
“ಆ ಹಣ್ಣು ಹಣ್ಣು ಮುದುಕಿಯ ವಯಸ್ಸಿನಲ್ಲಿಯೂ ನನ್ನಜ್ಜಿ ಬಹಳ ಪ್ರೀತಿಯಿಂದ, ನಗು ಮುಖವನ್ನೇ ಹೊಂದಿದ್ದರು. ಶತಾಯುಷಿ ಪಾತ್ರದ ಲುಕ್ಗಾಗಿ ನಾನು 6 ತಿಂಗಳ ಕಾಲ ಕೆಲಸ ಮಾಡಿದ್ದೇನೆ. ನನ್ನ ಮುಖದ ಚರ್ಮ ಪೂರ್ತಿ ಒಣಗಿದಂತೆ ಕಾಣಲು ಯಾವುದೇ ಸ್ಕಿನ್ ಕೇರ್ ಪ್ರಾಡೆಕ್ಟ್ಗಳನ್ನು ಬಳಸಲಿಲ್ಲ. ಬದಲಿಗೆ ಎಲ್ಲವನ್ನೂ ತ್ಯಜಿಸಿದೆ. ಪ್ರತಿದಿನ ಕುಳಿತು ಮಾ ಭಾರತಿ ಪಾತ್ರಕ್ಕೆ ಏನು ತಯಾರಿ ಬೇಕಿತ್ತೋ ಅದನ್ನೆಲ್ಲ ಮಾಡಿಕೊಳ್ಳುತ್ತಿದ್ದೆ. ಇದಕ್ಕೆ ನಮ್ಮ ಟೆಕ್ನಿಕಲ್ ಟೀಮ್ ಕೂಡ ಬಹಳ ಕಷ್ಟಪಟ್ಟಿದೆ. ಪರದೆಯ ಮೇಲೆ ಈ ಪಾತ್ರ ಹೇಗೆ ಮೂಡಿಬರುತ್ತೆ ಎಂಬುದನ್ನು ಕಾದು ನೋಡಬೇಕು” ಎಂದು ಪಲ್ಲವಿ ಹೇಳಿದ್ದಾರೆ,(ಏಜೆನ್ಸೀಸ್).