Sleeping Prince: ಕಳೆದ 20 ವರ್ಷಗಳಿಂದ ನಿದ್ರೆಯಲ್ಲಿ ಬದುಕು ಸಾಗಿಸುತ್ತಿರುವ ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಇದೀಗ ಕೋಮಾದಿಂದ ಎಚ್ಚರಗೊಂಡಿದ್ದಾರೆ. 2 ದಶಕಗಳ ಗಾಢ ನಿದ್ರೆಗೆ ರಾಜಕುಮಾರ ಮುಕ್ತಾಯ ಹಾಡಿದ್ದಾರೆ ಎಂಬ ಸುದ್ದಿಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿವೆ. ಅಸಲಿಗೆ ಇದು ನಿಜವೇ? ಎಂಬ ಪ್ರಶ್ನೆ ಬಹುತೇಕರಲ್ಲಿ ಕಾಡಿತ್ತು. ಕಡೆಗೂ ಇದಕ್ಕೆ ಉತ್ತರ ಲಭಿಸಿದೆ.
ಇದನ್ನೂ ಓದಿ: ಜೂ. 17ರಂದು ಡಾ. ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಪ್ಯೂಚರ್ ಸ್ಕಿಲ್ಸ್ ಲೋಕಾರ್ಪಣೆ
ಇತ್ತೀಚೆಗಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ಸ್ಲೀಪಿಂಗ್ ಪ್ರಿನ್ಸ್, ಇಂದಿಗೂ ಕೋಮಾದಲ್ಲಿಯೇ ಇದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಯಾಗಿವೆ. ಇದು ಅಕ್ಷರಶಃ ಸುಳ್ಳು ವಿಷಯ ಎಂಬುದು ಫ್ಯಾಕ್ಟ್ ಚೆಕ್ ಮೂಲಕ ಸಾಬೀತಾಗಿದೆ. ಅಷ್ಟಕ್ಕೂ ಯಾರು ಈ ಸೌದಿ ಅರೇಬಿಯಾದ ರಾಜಕುಮಾರ? ಈತನ ಹಿಂದಿರುವ ದುರಂತ ಕಥೆಯೇನು? ಯಾಕೆ ಕಳೆದ 20 ವರ್ಷಗಳಿಂದ ನಿದ್ರೆಯಲ್ಲೇ ಬದುಕು ಸಾಗಿಸುತ್ತಿದ್ದಾನೆ ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.
ಸೌದಿ ಅರೇಬಿಯಾದ ಅರಮನೆ ಜೀವನದ ಹಿಂದೆ, ಕೆಲವು ದುಃಖದ ಕಥೆಗಳೂ ಅಡಗಿರುತ್ತವೆ ಎಂಬುದಕ್ಕೆ ಇದೇ ಜ್ವಲಂತ ಸಾಕ್ಷಿ. ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರ ಜೀವನವನ್ನೇ ತಿಂದುಹಾಕಿದೆ. ಎರಡು ದಶಕಗಳಿಂದ ನಿದ್ರೆಯಲ್ಲೇ ಬದುಕುತ್ತಿರುವ ಈ ‘ಸ್ಲೀಪಿಂಗ್ ಪ್ರಿನ್ಸ್’, ಒಂದು ಘೋರ ಘಟನೆಯಿಂದ ಇಂದು ಈ ಪರಿಸ್ಥಿತಿಗೆ ತುತ್ತಾಗಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!: ವಿಡಿಯೋ ವೈರಲ್ | Revolver
ಕತ್ತಲೆಯಾದ ‘ಪ್ರಿನ್ಸ್’ ಬದುಕು
ಇತ್ತೀಚೆಗಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ರಾಜಮನೆತನದ ಅಲ್-ವಲೀದ್ ಏಪ್ರಿಲ್ 18, 2025ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಕಳೆದ 20 ವರ್ಷಗಳಿಂದ ಕೋಮಾದಲ್ಲಿರುವ ವಲೀದ್, 2005ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಮಾಗೆ ತುತ್ತಾದರು. ಅಪಘಾತ ನಡೆದ ಸಂದರ್ಭದಲ್ಲಿ ರಾಜಕುಮಾರ ಆರ್ಮಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಹಾಸಿಗೆ ಹಿಡಿದ ವಲೀದ್, ಇಂದಿಗೂ ಅದೇ ಹಾಸಿಗೆ ಮೇಲೆ ತಮ್ಮ ಜೀವನವನ್ನು ನಿದ್ರೆಯಲ್ಲೇ ಕಳೆಯುತ್ತಿರುವುದು ದುರಂತವೇ ಸರಿ.
ಯಾರು ಈ ರಾಜಕುಮಾರ ಅಲ್-ವಲೀದ್?
ರಾಜಕುಮಾರ ಅಲ್-ವಲೀದ್ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ರಾಜಕುಮಾರ ತಲಾಲ್ ಬಿನ್ ಅಬ್ದುಲಾಜೀಜ್ ಅವರ ಸುಪುತ್ರ. ರಾಜಕುಮಾರ ಅಲ್-ವಲೀದ್ ಸೌದಿ ರಾಜಮನೆತನದ ಉತ್ತರಾಧಿಕಾರಿಯಾಗಿ ಎಲ್ಲರ ಸಮ್ಮುಖದಲ್ಲಿ ರಾರಾಜಿಸಬೇಕಿತ್ತು. ಆದರೆ, ಎಲ್ಲವೂ ಅದೊಂದು ದುರಂತ ಘಟನೆಯಿಂದ ಮಾಸಿ ಹೋಗಿದೆ. ಕಳೆದ 20 ವರ್ಷಗಳಿಂದ ಪ್ರಿನ್ಸ್ ವಾಲಿದ್ ಹಾಸಿಗೆ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಿನ್ಸ್ ಅಲ್-ವಲೀದ್ ಕಳೆದ 20 ವರ್ಷಗಳಿಂದ ವೆಂಟಿಲೇಟರ್ ಸಹಾಯದಲ್ಲಿದ್ದು, ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಪೋಷಕರ ಭರವಸೆ
ಕೊನೆಯ ಬಾರಿಗೆ ಪ್ರಿನ್ಸ್ ದೇಹವು ಚಲಿಸಲು ಪ್ರಾರಂಭಿಸಿದ್ದು 2019ರಲ್ಲಿ. ಸಣ್ಣ ಸನ್ನೆಗಳೊಂದಿಗೆ ಏನೋ ಹೇಳಲು ಪ್ರಯತ್ನಿಸಿರುವುದು ಅವರ ಪೋಷಕರಲ್ಲಿ ಮುಂಚಿನಂತೆ ಮಗ ಎದ್ದು ಓಡಾಡುವ ಮುನ್ಸೂಚನೆಯನ್ನು ನೀಡಿದೆ. ಆದರೆ, ಮತ್ತೆ ನಿದ್ರೆಗೆ ಜಾರಿರುವ ಪ್ರಿನ್ಸ್, ಆ ಭರವಸೆಯನ್ನು ಭರವಸೆಯಾಗಿಯೇ ಉಳಿಸಿದ್ದಾರೆ.
ಬೆರಳು, ದೇಹ ತಿರುಗಿಸುವುದು ಸೇರಿದಂತೆ ಸಣ್ಣ ಸೂಚನೆಗಳು ವಲೀದ್ ತಮಗಾದ ಅಪಘಾತದ ಬಗ್ಗೆ ಹೇಳುವ ಪ್ರಯತ್ನ ಎಂದು ಭಾವಿಸಲಾಗಿದೆ. ಇದನ್ನು ಗಮನಿಸಿದ ವೈದ್ಯರು, ಕೇವಲ ಕೈ ಸನ್ನೆ ಮಾಡಿದ ತಕ್ಷಣ ಅವರಿಗೆ ಪ್ರಜ್ಞೆ ಬರುತ್ತಿದೆ ಅಥವಾ ಬಂದಿದೆ ಎಂದು ಭಾವಿಸಬೇಡಿ ಎಂದು ತಿಳಿಸಿದ್ದಾರೆ. ಇಷ್ಟಾದರೂ ಪೋಷಕರು ಮಾತ್ರ ಭರವಸೆ ಕಳೆದುಕೊಳ್ಳದೆ ಇಂದಲ್ಲ, ನಾಳೆ ಮಗ ಗುಣಮುಖನಾಗಿ ಮಾತನಾಡುತ್ತಾನೆ ಎಂಬ ಭರವಸೆಯಲ್ಲೇ ಬದುಕುತ್ತಿದ್ದಾರೆ,(ಏಜೆನ್ಸೀಸ್).