ಜೂ. 17ರಂದು ಡಾ. ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಪ್ಯೂಚರ್ ಸ್ಕಿಲ್ಸ್ ಲೋಕಾರ್ಪಣೆ

WhatsApp Image 2025-06-16 at 14.01.26_06d88fdf
ಮಂಗಳೂರು ವಳಚ್ಚಿಲ್‌ನ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿರುವ ಡಾ. ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಪ್ಯೂಚರ್ ಸ್ಕಿಲ್ಸ್‌ನ ಬಗ್ಗೆ ಎಥ್ನೋಟಿಕ್ ಗ್ರೂಪ್ ಅಧ್ಯಕ್ಷ ಡಾ. ಕಿರಣ್ ರಾಜಣ್ಣ ಮಾಹಿತಿ ನೀಡಿದರು.
Published on

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಘಟಕವಾಗಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಜಾಗತಿಕ ಉದ್ಯಮ ಪ್ರವೃತ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸುಧಾರಿತ ತಾಂತ್ರಿಕ ನಿಪುಣತೆಗಳನ್ನು ನೀಡುವ ಉದ್ದೇಶದಿಂದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಎಥ್ನೋಟೆಕ್ ಅಕಾಡೆಮಿ ಸಹಭಾಗಿತ್ವದಲ್ಲಿ ಪ್ರಾರಂಭಿಸುತ್ತಿರುವ ಆವಿಷ್ಕಾರಾತ್ಮಕ ಯೋಜನೆ ಡಾ ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಪ್ಯೂಚರ್ ಸ್ಕಿಲ್ಸ್ ಉದ್ಘಾಟನಾ ಸಮಾರಂಭ ಜೂ. 17ರಂದು ಬೆಳಗ್ಗೆ 10.30ಕ್ಕೆ ಮಂಗಳೂರು ವಳಚ್ಚಿಲ್‌ನ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಉದ್ಘಾಟಿಸುವರು. ಸ್ಪೀಕರ್ ಯು.ಟಿ. ಖಾದರ್, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ ಎನ್.ಎಂ., ಶ್ರೀನಿವಾಸ ವಿವಿ ಕುಲಾಧಿತಿ ಡಾ.ಸಿಎ ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್, ಎಥ್ನೋಟಿಕ್ ಗ್ರೂಪ್ ಅಧ್ಯಕ್ಷ ಡಾ. ಕಿರಣ್ ರಾಜಣ್ಣ, ಶ್ರೀನಿವಾಸ ಗ್ರೂಪ್ ಟ್ರಸ್ಟಿ ಸದಸ್ಯರಾದ ವಿಜಯಲಕ್ಷ್ಮೀ ಆರ್. ರಾವ್, ಪ್ರೊ. ಮಿತ್ರಾ ಎಸ್. ರಾವ್, ಶ್ರೀನಿವಾಸ ವಿವಿ ಮೌಲ್ಯಮಾಪನ ರಿಜಿಸ್ಟ್ರಾರ್ ಮತ್ತು ಎಸ್‌ಐಟಿ ಪ್ರಾಚಾರ್ಯ ಡಾ. ಶ್ರೀನಿವಾಸ ಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಥ್ನೋಟಿಕ್ ಗ್ರೂಪ್ ಅಧ್ಯಕ್ಷ ಡಾ. ಕಿರಣ್ ರಾಜಣ್ಣ, ಶ್ರೀನಿವಾಸ ವಿವಿ ಕುಲಸಚಿವ ಡಾ. ಅನಿಲ್‌ಕುಮಾರ್, ಡಾ. ಅಜಯ್‌ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ ಮಯ್ಯ ಉಪಸ್ಥಿತರಿದ್ದರು.

------------------

ಪ್ಯೂಚರ್ ಸ್ಕಿಲ್ಸ್ ಸೆಂಟರ್ ಹೊಸ ಮೈಲುಗಲ್ಲು

ಎಥ್ನೋಟಿಕ್ ಗ್ರೂಪ್ ಅಧ್ಯಕ್ಷ ಡಾ. ಕಿರಣ್ ರಾಜಣ್ಣ ಅವರು ಪ್ಯೂಚರ್ ಸ್ಕಿಲ್ಸ್ ಸೆಂಟರ್ ಬಗ್ಗೆ ಮಾಹಿತಿ ನೀಡಿ, ಡಾ. ಸಿಎ ಎ. ರಾಘವೇಂದ್ರ ರಾವ್ ಪ್ಯೂಚರ್ ಸ್ಕಿಲ್ಸ್ ಸೆಂಟರ್ ಪ್ರಸ್ತುತ ದಿನಗಳ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಮಾರ್ಗದರ್ಶನದಲ್ಲಿ ಹೊಸ ಮೈಲುಗಲ್ಲಾಗಿ ಪರಿಣಮಿಸಲಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲನಿರ್ಂಗ್, ಇಂಟರ್ನೆಟ್ ಆಫ್ ಥಿಂಗ್ಸ್, ಡೇಟಾ ಸೈನ್ಸ್ ಮುಂತಾದ ತಾಂತ್ರಿಕತೆಗಳ ತರಬೇತಿಗಳನ್ನು ಒದಗಿಸಲಾಗುತ್ತದೆ. ಉದ್ಯೋಗ ಪಡೆಯಲು ಪೂರಕವಾಗಿ ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ಇರಲಿದೆ. ಈ ಸೆಂಟರ್ ಮೂಲಕ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆ ನಡುವೆ ನೇರ ಪಾಲುದಾರಿಕೆ ಏರ್ಪಟ್ಟಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net