Revolver: ಪೆಟ್ರೋಲ್ ಬಂಕ್ ಸಿಬ್ಬಂದಿ ಎದೆಗೆ ಗನ್ ಇಟ್ಟು ಕೊಲೆ ಮಾಡುವ ಬೆದರಿಕೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಮರು ಜಾತಿಗಣತಿ ಮಾಡಲಾಗುತ್ತಿದೆ
ಘಟನೆ ಏನು..?
ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ಇಶಾನ್ ಖಾನ್ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಹೊರಬಂದರು. ಅವರ ಕಾರು ಬಿಲ್‌ಗ್ರಾಮ್ ಪ್ರದೇಶದ ಸಿಎನ್‌ಜಿ ಪೆಟ್ರೋಲ್ ಪಂಪ್‌ನಲ್ಲಿ ನಿಂತಿದೆ. ಆದಾಗ್ಯೂ ಗ್ಯಾಸ್ ತುಂಬಿಸುವಾಗ, ಅಲ್ಲಿನ ಸಿಬ್ಬಂದಿ ಇಶಾನ್‌ಗೆ ಕಾರಿನಿಂದ ಇಳಿಯಲು ನಯವಾಗಿ ಹೇಳಿದ್ದಾರೆ.
ಇಷ್ಟಕ್ಕೆ ಕೂಪಿತಗೊಂಡ ಇಶಾನ್, ನಾನು ಕಾರಿನಿಂದ ಕೆಳಗೆ ಇಳಿಯಬೇಕಾ? ಎಂದು ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಅವನ ಹೆಂಡತಿ ಹಾಗೂ ಮಗಳು ಕೂಡ ಕಾರಿನಿಂದ ಹೊರ ಬಂದು ಜಗಳ ಮಾಡಿದ್ದಾರೆ. ಅಷ್ಟರಲ್ಲೇ ಮಗಳು ಸುರುಷ್ ಖಾನ್ (ಅರಿಬಾ) ಕಾರಿನಿಂದ ಇಳಿದು ಏಕಾಏಕಿ ರಿವಾಲ್ವರ್ ಅನ್ನು ಹೊರತೆಗೆದು, ಅಲ್ಲಿದ್ದ ಸಿಬ್ಬಂದಿಯ ಎದೆಗೆ ನೇರವಾಗಿ ತೋರಿಸಿ “ನಾನು ನಿಮಗೆ ಗುಂಡು ಹಾರಿಸಬೇಕಾ?” ಎಂದು ಬೆದರಿಸಲು ಪ್ರಾರಂಭಿಸಿದ್ದಾಳೆ. ಇದೀಗ ಈ ವಿಡಿಯೋ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.
*इतनी गोली मारूंगी कि घरवाले भी पहचानने से इनकार कर देंगे”*
UP के जिला हरदोई में एक कार में CNG भरनी थी। सेल्समैन से कार सवारों को नीचे उतरने को कहा। इस पर विवाद हुआ। महिला ने सेल्समैन के सीने पर रिवॉल्वर तान दी।
महिला अरीबा खां, हुस्नबानो, एहसान खां पर FIR दर्ज, रिवॉल्वर जब्त। pic.twitter.com/3cP7ansi6W
— TANVIR RANGREZ (@virjust18) June 16, 2025
ಸಂತ್ರಸ್ತ ರಜನೀಶ್ ಕುಮಾರ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಂಪತಿ ಮತ್ತು ರಿವಾಲ್ವರ್ ಮಾಲೀಕರನ್ನೂ ಬಂಧಿಸಲಾಗಿದೆ.(ಏಜೆನ್ಸೀಸ್)
ಈ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಅಧಿಕ ಮದ್ಯಪಾನ ಮಾಡ್ತಾರಂತೆ! ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ | Alcohol
ನಡು ರಸ್ತೆಯಲ್ಲೇ ಲವ್ ಬರ್ಡ್ಸ್ ರೋಮ್ಯಾನ್ಸ್; ಪೊಲೀಸರು ಮಾಡಿದ್ದೇನು?: ವಿಡಿಯೋ ಇಲ್ಲಿದೆ ನೋಡಿ | Romance